ಹದಗೆಟ್ಟ ರಸ್ತೆ ದುರಸ್ಥಿಗೆ ಗ್ರಾಮಸ್ಥರ ಆಗ್ರಹ

ಚಿಂಚೋಳಿ,ಜೂ.24- ನಿರ್ಮಾಣಗೊಂಡ ವರ್ಷದೊಳಗೆ ಸೇತು ಪಕ್ಕದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಮಾರ್ಗದ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಕೂಡಲೇ ರಸ್ತೆಯನ್ನು ದುರಸ್ಥಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಯ0ಪಳ್ಳಿಯಿಂದ ದೇಗಲಮಡಿ ಗ್ರಾಮಕ್ಕೆ ಹೋಗುವ ರಸ್ತೆ ಮಧ್ಯೆದ ಸೇತುವೆ ಒಂದು ವರ್ಷ ಹಿಂದೆ ನಿರ್ಮಾಣ ಮಾಡಲಾಗಿತ್ತು ಆದರೆ ಒಂದು ವರ್ಷದ ಒಳಗಾಗಿ ಸೇತುವೆ ಪಕ್ಕದ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಇದರಿಂದ ಯ0ಪಳ್ಳಿ ಮತ್ತು ದೇಗಲಮಡಿ ರೈತರಿಗೆ ಓಡಾಡಲು ತೊಂದರೆಯಾಗುತ್ತಿದೆ.
ಹದಗೆಟ್ಟಿರುವ ಈ ರಸ್ತೆಯ ದುರಸ್ಥಿಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು, ಹದಗೆಟ್ಟಿರುವ ಸೇತುವೆ ಪಕ್ಕದ ರಸ್ತೆ ಸರಿಪಡಿಸಬೇಕೆಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಮಡಿವಾಳ, ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ