ಹದಗೆಟ್ಟ ರಸ್ತೆ ದುರಸ್ತಿ ಪಡಿಸಲು ಗ್ರಾಮಸ್ಥರ ಆಗ್ರಹ

ಹನೂರು ಜ.10:- ಗ್ರಾಮಕ್ಕೆ ಸಂಪರ್ಕ ಸಂಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರು ಸಾರ್ವಜನಿಕರು ಓಡಾಡಲು ಕಷ್ಟವಾಗಿದ್ದು ರಸ್ತೆ ದುರಸ್ತಿ ಪಡಿಸಲು ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳು ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ಗ್ರಾಮಸ್ಥರು ಆರಂಭಿಸಿದ್ದಾರೆ.
ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟನ ಮೊಳೆ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆ ದುರಸ್ತಿಲಿದೆ ಈ ಗ್ರಾಮದಲ್ಲಿ ಸುಮಾರು 200 ಮನೆ ವಾಸವವಿದು ಯಾವುದೇ ರೀತಿಯ ರಸ್ತೆ ಸಂಪರ್ಕ ಸರ್ಕಾರದಿಂದ ಮಾಡಿಕೊಟ್ಟಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಕೊಟ್ಟನು ಮೋಳೆ ಗ್ರಾಮಕ್ಕೆ ಹೋಗಲು ಕಾಡಂಚಿನ ರಸ್ತೆಯಲ್ಲಿ ಹೋಗಬೇಕು ಇಲ್ಲಿ ಕಾಡು ಪ್ರಾಣಿಗಳು ರಸ್ತೆ ಬದಿಯಲ್ಲಿದ್ದರು ಜನರಿಗೆ ಕಣ್ಣಿಗೆ ಕಾಣುವುದಿಲ್ಲ. ಭಯದಿಂದಲೇ ಸಂಚಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದರು ಯಾವುದೇ ರೀತಿಯ ಅನುಕೂಲಗಳನ್ನು ಮಾಡಿಕೊಟ್ಟಿಲ್ಲ.
ಗ್ರಾಮದ ಸಮಸ್ಯೆಯ ಬಗ್ಗೆ ಸ್ಪಂದಿಸುತ್ತಿಲ್ಲ ಹಾಗೂ ಹನೂರು ಕ್ಷೇತ್ರದ ಶಾಸಕರಾದ ನರೇಂದ್ರ ಅವರು ಈ ಗ್ರಾಮಕ್ಕೆ ಯಾವುದೇ ರೀತಿಯಾದ ಮೂಲಸೌಕರ್ಯಗಳನ್ನು ಒದಗಿಸಿ ಕೊಡುತ್ತಿಲ್ಲ ಎಂಬುದು ಇಲ್ಲಿನ ಜನರ ಆರೋಪವಾಗಿದೆ.
ಇಲ್ಲಿ ವೃದ್ಧರು ಮತ್ತು ಗರ್ಭಿಣಿಯರು ಚಿಕ್ಕ ಮಕ್ಕಳು ಶಾಲೆಗೆ ಹೋಗಲು ತುಂಬಾ ಸಮಸ್ಯೆಯಾಗಿದೆ. ಈ ರಸ್ತೆಯಲ್ಲಿ ಗುಂಡಿ ಮತ್ತು ಮುಳ್ಳು ಬೇಳಿಗಳು ಮತ್ತು ಕಲ್ಲು ಬಂಡೆಗಳಿಂದ ಕೂಡಿದ ರಸ್ತೆ ಇದಾಗಿದೆ. ಇಲ್ಲಿ ವಾಹನಗಳು ಓಡಾಡಲು ತುಂಬಾ ಕಷ್ಟವಾಗುತ್ತದೆ ದಿನನಿತ್ಯ ಜನಗಳಿಗೆ ಕಷ್ಟ ನೋವನ್ನು ಅನುಭವಿಸುತ್ತಿದ್ದಾರೆ.
ಏಕೆಂದರೆ ನಮಗೆ ಇರುವುದು ಒಂದೇ ರಸ್ತೆ ಡ್ಯಾಮ್ ಪಕ್ಕದಲ್ಲಿ ಇದೆ ಮೂರು ವರ್ಷದಿಂದ ಸತತವಾಗಿ ಪಿಡಬ್ಲ್ಯೂಡಿ ಅಧಿಕಾರಿಗಳಿಗೂ ಅರ್ಜಿಯನ್ನು ಸಲ್ಲಿಸಿದ್ದೇವೆ ಆದರೂ ರಸ್ತೆ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಚಾನಲ್ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದಿಂದ ಎಷ್ಟೇ ಹಣ ಬಿಡುಗಡೆ ಮಾಡಿದರು ಇಲ್ಲಿ ಮಾತ್ರ ಯಾವುದೇ ರೀತಿ ಕೆಲಸ ಮಾಡುತ್ತಿಲ್ಲ ಇಲ್ಲಿಗೆ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದ ಹಣವನ್ನು ತೇಗುತ್ತಿದ್ದಾರೆ. ಹೊರತು ಅಭಿವೃದ್ಧಿ ಕೆಲಸ ಮಾತ್ರ ಮಾಡುತ್ತಿಲ್ಲ. ಇನ್ನಾದರೂ ಈ ಗ್ರಾಮದ ಬೇಕಾದ ಉತ್ತಮ ರಸ್ತೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕೆಂಬುದು ಇಲ್ಲಿನ ಜನರು ಆಗ್ರಹಿಸಿದ್ದಾರೆ.