ಹದಗೆಟ್ಟ ರಸ್ತೆ ಕೂಡಲೇ ಸರಿಪಡಿಸಲು ಶಾಸಕ ರಾಮಪ್ಪ ತಾಕೀತು


ಹರಿಹರ.ಡಿ.6 ; ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಕಾರ್ಯಗಳನ್ನು ಮಾಡಿ ಸಾರ್ವಜನಿಕರಿಗೆ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಶಾಸಕ ಎಸ್ ರಾಮಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು ನಗರಾದ್ಯಂತ ಹದಗೆಟ್ಟ ರಸ್ತೆ ಒಳಚರಂಡಿ, ಇನ್ನಿತರೆ ಮೂಲಭೂತ ಸೌಕರ್ಯಗಳ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಹೇಳಿದರು ಸಾರ್ವಜನಿಕರ ಮಾತಿಗೆ ಕಿಮ್ಮತ್ತು ಬೆಲೆ ಇಲ್ಲದಂತಾಗಿದೆ ಎಂದು ಸಾರ್ವಜನಿಕರ ದೂರುಗಳನ್ನು ಆಲಿಸಿದ ಶಾಸಕರು ವಿದ್ಯಾನಗರ ಇಂದಿರಾನಗರ ಮತ್ತು ವಿವಿಧ ಬಡಾವಣೆಗಳಿಗೆ ತೆರಳಿ ಹದಗೆಟ್ಟ ರಸ್ತೆಗಳು, ಚರಂಡಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಇತ್ತೀಚೆಗೆ ಸುರಿದ ಮಳೆಗೆ ನಗರದ ರಸ್ತೆಗಳು ದೊಡ್ಡ ಗಾತ್ರದ ತಗ್ಗು ಗುಂಡಿಗಳು ಬಿದ್ದಿವೆ ಮಳೆ ಬಂದರೆ ಮನೆಗಳಿಗೆ ನೀರು ನುಗ್ಗಿ ಜನಜೀವನ ದುಸ್ತರವಾಗಿದೆ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸದೆ ಮಳೆ ಬಂದಾಗ ಅಧಿಕಾರಿಗಳಿಗೆ ಜ್ಞಾನೋದಯವಾಗುತ್ತದೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಇರುವುದು ಅನಾಹುತಗಳಿಗೆ ಕಾರಣವಾಗುತ್ತದೆ. ಅಧಿಕಾರಿಗಳು ಕಚೇರಿಯಲ್ಲಿ ಕಾಲಹರಣ ಮಾಡುವುದನ್ನು ಬಿಟ್ಟು  ಪ್ರತಿ ಬಡಾವಣೆ ಗಲ್ಲಿ ಗಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಸಮಸ್ಯೆ ಏನೆಂದು ತಿಳಿಯುತ್ತದೆ ಅದನ್ನ ಬಿಟ್ಟು ತೊಂದರೆಗಳು ಎದುರಾದಾಗ ಮಾತ್ರ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಕ್ಕೆ ಆಗೋದಲ್ಲ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆ ಪ್ರಾಮಾಣಿಕತೆಯಿಂದ ಮಾಡಬೇಕು ಯುಜಿಡಿ  ಮತ್ತು ಜಲ ಸಿರಿ ಕಾಮಗಾರಿಯಿಂದ ನಗರದಲ್ಲಿರುವ ಸುಂದರವಾದ ರಸ್ತೆಗಳನ್ನು ಹಾಳು ಮಾಡಿ ಸಾರ್ವಜನಿಕರಿಗೆ ವಾಹನ ಸವಾರರಿಗೆ ತೊಂದರೆ ಕೊಡುವಂಥ ಪರಿಸ್ಥಿತಿ ನಿರ್ಮಾಣ ಮಾಡಿದ್ದೀರಾ  ತಮ್ಮ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ಹದಗೆಟ್ಟ ರಸ್ತೆಗಳು ಹೂಳು ತುಂಬಿಕೊಂಡಿರುವ ದೊಡ್ಡ ದೊಡ್ಡ ಗಟಾರ ಚರಂಡಿಗಳು ಸ್ವಚ್ಚತೆ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚು ಗಮನ ಕೊಟ್ಟು ಕೂಡಲೇ ಹದಗೆಟ್ಟ ರಸ್ತೆಗಳ ಕಾಮಗಾರಿ ಮಾಡುವುದಕ್ಕೆ ಮುಂದಾಗಬೇಕೆಂದು ಸ್ಥಳದಲ್ಲಿದ್ದ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ವೇಳೆ ನಗರಸಭಾ ಪೌರಾಯುಕ್ತೆ ಎಸ್ ಲಕ್ಷ್ಮಿ .ನಗರಸಭೆ ಕಾರ್ಯಪಾಲಕ ಅಭಿಯಂತರಾದ ಎಸ್ ಎಸ್ ಬಿರಾದರ್ . ದಾದಾಪೀರ್ ಭಾನುವಳ್ಳಿ .ಶಾಸಕರ ಆಪ್ತ ಕಾರ್ಯದರ್ಶಿಗಳಾದ ಹನುಮಂತಪ್ಪ. ವಿಜಯಮಾಂತೇಶ ಇದ್ದರು.Attachments areaReplyReply to allForward