ಹದಗೆಟ್ಟ ರಸ್ತೆಗಳು: ಕಣ್ತೆರೆವವರಾರು?


ಹುಬ್ಬಳ್ಳಿ, ಡಿ 3: ಅವಳಿ ನಗರದ ರಸ್ತೆಗಳಲ್ಲಿ ಸಂಚರಿಸಬೇಕಾದರೇ ವಾಹನ ಸವಾರರು ಸುಗಮ ಸಂಚಾರಕ್ಕೆ ದಾರಿ ಯಾವುದಯ್ಯ ಎನ್ನುವಂತಾಗಿದೆ.
ಮಳೆಯಿಂದಾಗಿ ಅವಳಿ ನಗರದ ಕಾಟನ್ ಮಾರ್ಕೆಟ್, ಕೊಪ್ಪಿಕರ ರಸ್ತೆ, ಗೋಪನಕೊಪ್ಪ ರಸ್ತೆ ಸೇರಿದಂತೆ ಕೆಲ ರಸ್ತೆಗಳು ತಗ್ಗು-ಗುಂಡಿಗಳಿಂದ ಕೂಡಿದ್ದು, ಮಳೆಗಾಲದಲ್ಲಿ ರಸ್ತೆ ಯಾವುದು? ಹೊಂಡ ಯಾವುದು? ಎಂಬ ಪರಿಸ್ಥಿತಿ ವಾಹನ ಸವಾರರಿಗೆ ಸರ್ವೇ ಸಾಮಾನ್ಯವಾಗಿದ್ದು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ.
ಮಳೆಗಾಲದಲ್ಲಿ ತಗ್ಗು ಗುಂಡಿಗಳಿಂದ ಕೂಡಿದ ಕೆಸರಿನ ಕಿರಿಕಿರಿಯಾದರೇ, ಬೇಸಿಗೆಯಲ್ಲಿ ಧೂಳಿನಿಂದ ಸಾರ್ವಜನಿಕರು ತೊಂದರೆಯನುಭವಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.
ಶೀಘ್ರವೇ ವಾಣಿಜ್ಯ ನಗರಿ ಹಾಗೂ ಫೇಢಾ ನಗರಿಯ ರಸ್ತೆಗಳನ್ನು ದುರಸ್ತಿ ಮಾಡಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.