ಹದಗೆಟ್ಟ ಕಲಬುರಗಿ-ಅಫಜಲಪೂರ ರಸ್ತೆ: ದುರಸ್ಥಿಗೆ ಆಗ್ರಹ

ಕಲಬುರಗಿ,ಜ.11- ಕಲಬುರಗಿ ಯಿಂದ ಅಫಜಲಪೂರ ಮಾರ್ಗದ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಈ ಮಾರ್ಗದ ರಸ್ತೆ ಸಂಚಾರ ನರಕಯಾತನೆಯ ಅನುಭವ ಮಾಡಿಸುತ್ತಿದೆ ಎಂದು ಗ್ರಾಮಸ್ಥರು ತಮ್ಮ ನೋವುನ್ನು ತೊಡಿಕೊಂಡಿದ್ದಾರೆ.
ಅಫಜಲಪೂರ ದಿಂದ ಕಲಬುರಗಿಗೆ ಪ್ರತಿನಿತ್ಯ ಬರುವ ಸಿರಸಗಿ, ಹಡಗಿಲ, ಗೊಬ್ಬೂರ, ಚೌಡಾಪೂರ, ಅತನೂರು ಸೇರಿದಂತೆ ಸುತ್ತಲಿನ ಗ್ರಾಮಸ್ಥರುನರಕಯಾತನೆಯನ್ನು ಅನುಭವಿಸುವಂತಾಗಿದೆ.
ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಕಲಬುರಗಿ ಅಫಜಲಪೂರ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ಎಲ್ಲಿ ನೋಡಿದರಲ್ಲಿ ತೆಗ್ಗುದಿಣ್ಣೆಗಳು, ರಸ್ತೆಯ ಮೇಲಿನ ಡಾಂಬರ ಕೊಚ್ಚಿಕೊಂಡು ಹೋದಪರಿಣಾಮ ರಸ್ತೆಯಲ್ಲಿ ಮಣ್ಣು ಕಾಣಿಸುತ್ತಿದೆ. ಈ ಮಾರ್ಗದಿಂದ ಸಂಚರಿಸುವ ಪ್ರಯಾಣಿಕರು ಅನುಭವಿಸು ನೋವು ಹೇಳತಿರದಂತಾಗಿದೆ. ಸಂಬಂಧ ಪಟ್ಟ ಇಲಾಖೆ ಇತ್ತ ಗಮನಹರಿಸಿ ಇಲ್ಲಿನ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಈ ಮಾರ್ಗದಲ್ಲಿ ಬರುವ ಗ್ರಾಮಸ್ಥರು ಮನವಿ ಮಾಡಿದ್ದಾರೆ.