ಹದಗೆಟ್ಟಿರುವ ನಗರದ ಎಲ್ಲಾ ರಸ್ತೆಗಳ ದುರಸ್ತಿಗೆ ಎಸ್‍ಯುಸಿಐ ಆಗ್ರಹ

ಕಲಬುರ್ಗಿ:ನ.4: ನಗರದಲ್ಲಿ ಹದಗೆಟ್ಟ ಮುಖ್ಯ ರಸ್ತೆಗಳು ಮತ್ತು ವಿವಿಧ ಬಡಾವಣೆಗಳಲ್ಲಿ ಕೆಟ್ಟುಹೊದ ರಸ್ತೆಗಳನ್ನು ಈ ಕೂಡಲೇ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು. ನಗರದ ಮುಖ್ಯ ರಸ್ತೆ ಮತ್ತು ಬಡಾವಣೆಯಲ್ಲಿ ಬೀದಿ ಲೈಟುಗಳು ಹಾಕಿಸಬೇಕು, ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಎಸ್. ಯು, ಸಿ, ಐ ಕಮುನಿಸ್ಟ್ ಪಕ್ಷದ ನಿಯೋಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಇಲ್ಲಿಮ ಜನಸಂಖ್ಯೆಗೆ ತಕ್ಕಂತೆ ರಸ್ತೆಗಳು ಫುಟ್ಫಾತಗಳು ಇಲ್ಲದ ಕಾರಣ ಇಲ್ಲಿನ ಸಾರ್ವಜನಿಕರು ವಾಹನ ಸವಾರರು ಹಲವಾರು ಸಮಸ್ಯೆಗಳನ್ನು ಎದಿರುಸುವಂತಾಗಿದೆ. ನಗರದಲ್ಲಿ ಕಳೆದ ಎರೆಡು ವಾರಗಳ ಹಿಂದೆ ಹಬ್ಬರಿಸಿದ ಭಾರೀ ಮಳೆಗೆ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಹಾಗೇ ಮಳೆರಭಸಕ್ಕೆ ಹಾಳಾಗಿ ಹೋಗಿರುವ ರಸ್ತೆಗಳು ಮಹಾನಗರಪಾಲಿಕೆ ಲೋಕೋಪಯೋಗಿ ಇಲಾಖೆ ಮಳೆನಿಂತು ವಾರಕಳೆದರೊ ಇಲ್ಲಿಯವರೆಗೆ ಯಾವುದೇ ರೀತಿಯಾ ದುರಸ್ತಿ ಕಾರ್ಯಕೈಗೆತಿಕೊಳ್ಳದಿರುವುದನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಎಸ್, ಯು, ಸಿ, ಐ ಕಮೂನಿಸ್ಟ್ ಪಕ್ಷ ತನ್ನ ಮನವಿಯಲ್ಲಿ ಖಂಡಿಸ್ತಿದೆ.
ಧಾರಾಕಾರ ಮಳೆಯಿಂದ ಮತ್ತಷ್ಟು ರಸ್ತೆಗಳು ಹದಗೆಟ್ಟಿವೆÉ ಡಾಂಬರು ಕಿತ್ತು ಹೋಗಿ ಕಲ್ಲುಗಳು ಎದ್ದು ಕಾಣುತ್ತಿವೆ. ಸ್ವಲ್ಪ ಮಳೆ ಬಂದರೆ ರಸ್ತೆಗಳ ಪಾಡು ಕೆಸರುಗದ್ದೆ ಯಾಗುತ್ತಿದೆ. ರಸ್ತೆಮೇಲಿನ ಗುಂಡಿಗಳಿಗೆ ನೀರು ತುಂಬುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಮತ್ತು ರಸ್ತೆಗಳು ಹುಡುಕುವ ಪರಿಸ್ಥಿತಿ ಉಂಟಾಗಿದೆ.
ಚರಂಡಿಗಳು ತೆರೆದು ರಸ್ತೆಗಳ ಮೇಲೆ ಹರಿವುದು, ಉದ್ಯಾನವನ ಸ್ವಚ್ಛೆತೆ, ಕಸವಿಲೆವಾರಿ, ಸಾರ್ವಜನಿಕ ಮೂತ್ರಾಲಯ ನಿರ್ವಣೆ ಕೊರತೆ ಹೀಗೆ ಹಲವಾರು ಸಮಸ್ಯೆಗಳು ಕಾಡುತ್ತಿವೆÀ. ರಸ್ತೆ ಸಮಸ್ಯೆ ಒಂದು ಕಡೆಯಾದರೆ ಮತ್ತೆ ಇಂತಹ ಇತರ ಸಮಸ್ಯೆಗಳಿಂದ ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳ ಪರಿಸ್ಥಿತಿ ಈ ಗತಿಯಾದರೆ ಇನ್ನೂ ಬಡಾವಣೆಗಳ ಒಳ ರಸ್ತೆಗಳು ತೀರ ಹದಗೆಟ್ಟಿದ್ದು ಜನರು ಓಡಾಡುವುದು ಕಷ್ಟವಾಗುತ್ತಿದೆ.
ನಗರದಲ್ಲಿ ವಾಹನ ಸವಾರರು ರಸ್ತೆಯಲಿ ್ಲ ಸಂಚರಿಸಬೆಕಾದರೆ ತಮ್ಮ ಜೀವನವನ್ನು ಕೈಯಲ್ಲಿ ಹಿಡಿದುಕೊಂಡು ಒಡಾಡುವಂತಹ ಗಂಭೀರ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಹಾಡು ಹಗಲೇ ಹದಗೆಟ್ಟ ರಸ್ತೆಗಳ ಮೇಲೆ ಸಂಚರಿಸುವುದೆಂದರೆ ಸರ್ಕ್‍ಸ್ ಮಾಡಿದಂತೆ ಆಗುತ್ತಿದೆ. ಶಾಹ ಬಜಾರ ನಿಂದ ರಿಂಗ್ ರಸ್ತೆಗೆ ಹೋಗುವ ರಸ್ತೆ ಹದಗೆಟ್ಟಿದೆ, ಕೋರ್ಟ್ ರಸ್ತೆ, ಹೀಗೆ ನಗರದ ಪ್ರಮುಖ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆಗಳು ಕೂಡ ಸಂರ್ಪೂಣವಾಗಿ ಹದಗೆಟ್ಟು ಹೋಗಿವೆ. ಕೂಡಲೇ ಸ್ಥಳಗಳಿಗೆ ಭೇಟಿ ನೀಡಿ ಆದಷ್ಟು ಬೇಗ ಹದಗೆಟ್ಟ ರಸ್ತೆಗಳನ್ನು ದುರಸ್ತಿಕೈಗೊಳ್ಳುವಂತೆ
ಎಸ್. ಯು, ಸಿ, ಐ ಕಮುನಿಸ್ಟ್ ಪಕ್ಷದ ಮಹೇಶ ಎಸ್ ಬಿ ಮತ್‍ತು ಎಸ್ ಎಮ್ ಶರ್ಮಾ ಅವರು ಒತ್ತಾಯಿಸಿದ್ದಾರೆ.