ಹತ್ಯೆ ಪ್ರಕರಣ: ಮೂವರ ಸೆರೆ 

ಬೆಳ್ತಂಗಡಿ, ಸೆ.1೩- ಇಂದಬೆಟ್ಟು ಗ್ರಾಮದ ಶಾಂತಿನಗರ ಎಂಬಲ್ಲಿ ಜಮೀನಿನ ವಿಚಾರವಾಗಿ ಹೊಡೆದಾಟದ ಸಂದರ್ಭದಲ್ಲಿ ಮೃತಪಟ್ಟ ವಿಚಾರವಾಗಿ ಬೆಳ್ತಂಗಡಿ ಪೊಲೀಸರು ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇಂದಬೆಟ್ಟು ಗ್ರಾಮದ ಕುವೆತ್ಯಾರು ನಿವಾಸಿ ಜಾರಪ್ಪನಾಯ್ಕ (55) ಜು.27 ರಂದು ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಭಂಧಿಸಿ ಇಂದಬೆಟ್ಟು ಶಾಂತಿನಗರ ನಿವಾಸಿಗಳಾದ ದೀಪಕ್ ಶೆಟ್ಟಿ,  ಮನ್ನಡ್ಕ ನಿವಾಸಿ ಮನೋಹರ ಗೌಡ, ಚಂದ್ರಕಾಂತ್ ನಾಯಕ್ ಬಂಧಿತ ಆರೋಪಿಗಳು. ಜಮೀನಿನಲ್ಲಿ ವಿಚಾರದಲ್ಲಿ ಗಲಾಟೆ ನಡೆಯುತ್ತಿರುವ ಸಂದರ್ಭ ಜಾರಪ್ಪ ನಾಯ್ಕ್ ಅವರು ಸ್ಥಳಕ್ಕೆ ತೆರಳಿದಾಗ ಘಟನಾ ಸ್ಥಳದಲ್ಲಿ ಜಾರಪ್ಪ ನಾಯ್ಕ್ ಅವರನ್ನು ತಳ್ಳಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದಾದ ಅದಾಗಲೆ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದರು. ಈ ವಿಚಾರವಾಗಿ ಮೃತರ ಮಗ ರಾಜಶೇಖರ್ ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರು ತಲೆಮರೆಸಿಕೊಂಡಿದ್ದು, ಬಳಿಕ ನಿರೀಕ್ಷಣಾ ಜಾಮೀನಿಗೆ ಮಂಗಳೂರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಜಾಮೀನು ತಿರಸ್ಕೃತಗೊಂಡಿದ್ದರಿಂದ ಪೊಲೀಸರು ಆರೋಪಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಅದರಂತೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.