ಹತ್ಯೆ ಖಂಡಿಸಿ ಪ್ರತಿಭಟನೆ

ಬಾಗಲಕೋಟೆ, ಮೇ18: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಅಖಿಲ ಕರ್ನಾಟಕ ಬೆಸ್ತರ ಕೂಲಿ ಅಂಬಿಗೇರ ಜಾತಿ ಮೀಸಲಾತಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿದರು.
ನವನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖಂಡರು, ಅಂಜಲಿ ಅಂಬಿಗೇರ ಹತ್ಯೆ ಮಾಡಿರುವ ಆರೋಪಿಗೆ ಗಲ್ಲು ಶಿಕ್ಷೆ ವಿಧಿ ಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಅಂಜಲಿ ಕುಟಂಬದವರು ಬೆಂಡಿಗೇರಿ ಪೊಲೀಸ್ ಠಾಣೆಗೆ ನಮಗೆ ಕಿರುಕುಳ ನೀಡುತ್ತಿ ದ್ದಾನೆಂದು ಎಂದು ದೂರು ಕೊಡಲು ಠಾಣೆಗೆ ಹೋದರು ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದು ಯಾವುದೇ ಕ್ರಮ ಜರುಗಿಸದೇ ಇರುವ ಕಾರಣ ಈ ಕೊ¯ Éಯಾಗಿದೆ ಎಂದು ಮನವಿ ಪತ್ರದಲ್ಲಿ ಆರೋಪಿ ಸಿದ್ದಾರೆ. ಸರ್ಕಾರ ಕೂಡಲೇ ಅಂಜಲಿ ಅಂಬಿಗೇರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಯಲ್ಲಪ್ಪ ಅಂಬಿಗೇರ, ಸಂಜು ಡಿಗ್ಗಿ, ಯಮನಪ್ಪ ಮಡಿಕೇರಿ, ಸಂಗಪ್ಪ ಪ್ಯಾಟಿ, ಸಂಗಮೇಶ ಕರಬಂದ, ಚನ್ನು ಅಂಬಿ, ಸುಭಾಸ ರಾಮೋಡಗಿ, ಬಸಪ್ಪ ಮಾಗಿ, ಭೀಮಣ್ಣ ಅರಕೇರಿ, ಗೊ ೀಪಾಲ ಕಟ್ಟಿಮನಿ, ರಾಮಣ್ಣ ಬಾರಕೇರಿ, ಸಂಗಮೇಶ ಮಾಗಿ, ಚನ್ನಪ್ಪ ಅಂಬಿಗೇರ, ಪರಶುರಾಮ ಅಂಬಿಗೇರ ಸೇರಿದಂತೆ ಮತ್ತಿತರರು ಇದ್ದರು.