ಹತ್ಯೆಯ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ ಸಿಎಂಗೆ ಹಿಂದೂ ಸಂಘಟಕರ ಮನವಿ.


ಕೂಡ್ಲಿಗಿ. ಜು. 29 :- ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟೂರ್  ಹತ್ಯೆಯನ್ನು ಖಂಡಿಸಿ ಹಂತಕರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಹೊಸಹಳ್ಳಿ ಹೋಬಳಿಯ  ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಹೊಸಹಳ್ಳಿ ನಾಡಕಛೇರಿ ಉಪ ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿರವರಿಗೆ ಮನವಿ ಸಲ್ಲಿಸಿದರು.
ಭಾರತ  ಅನೇಕ ಜಾತಿ ಧರ್ಮಗಳನ್ನು ಹೊಂದಿದ್ದು ವೈವಿದ್ಯತೆಯಲ್ಲಿ  ಏಕತೆಯನ್ನು ಹೊಂದಿರುವ ದೇಶವಾಗಿದೆ ಇಲ್ಲಿ ಎಲ್ಲರೂ  ಸಹಬಾಳ್ವೆಯಿಂದ ಬಾಳುತ್ತಿದ್ದೇವೆ ಯಾರೋ ಕೆಲ ವ್ಯಕ್ತಿಗಳು ಇಂತಹ ಹೀನ ಕೃತ್ಯಗಳನ್ನು ಮಾಡಿ ಸಮಾಜದ ನೆಮ್ಮದಿಯನ್ನು ಕದಡುತ್ತಿದ್ದಾರೆ ಇಂತಹ ಸಮಾಜ ದ್ರೋಹಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು  ಬಿಜೆಪಿ ಕಾರ್ಯಕರ್ತ ವೀರೇಶ್ ಕಿಟ್ಟಪ್ಪನವರ್ ಸರ್ಕಾರವನ್ನು ಒತ್ತಾಯಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಮುಖಂಡರುಗಳಾದ  ಕೆ.ಎಸ್. ವಿಶ್ವನಾಥ್, ಹನುಮಜ್ಜರ ನಾಗೇಶ್, ಕುಲುಮೆಹಟ್ಟಿ ಚೌಡಪ್ಪ, ವಿರುಪಣ್ಣ, ಜೋಗಿಹಳ್ಳಿ
ಸಿದ್ದಪ್ಪ,ಪಿತಾಂಬರ್, ಗೀತಾ.ಎಲ್, ಯಶವಂತ ಕುಮಾರ, ಶರತ್.ವಿ, ನಡುವಲುಮನೆ ತಿಪ್ಪೇಸ್ವಾಮಿ, ಫೋಟೋ ನಾಗರಾಜ್, ಜೆ. ಎಂ. ಮಂಜುನಾಥ್,
ಕೆ. ಎಸ್. ವೀರೇಶ್, ರಾಕೇಶ್ ವಾಲ್ಮೀಕಿ, ಸಂತೋಷ,
ಕೆ. ಎಸ್. ವಿನೋದ್, ಸತೀಶ್, ಸ್ವಾಮಿ, ಸುರೇಶ ಉಪಸ್ಥಿತರಿದ್ದರು.

Attachments area