ಹತ್ಯೆಗಿಡಾದವರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ- ಎಂ.ಡಿ.ವಲಿ

ಸಿರವಾರ.ಆ.೦೪- ರಾಜ್ಯದಲ್ಲಿ ವಿವಿಧ ಸಮಾಜದ ಯುವಕರ ಮೇಲೆ ಜರುಗುತ್ತಿರುವ ಹತ್ಯೆಗಳನ್ನು ಎಲ್ಲಾರೂ ಖಂಡಿಸುತ್ತೆವೆ,ಸರ್ಕಾರ ಎಲ್ಲಾ ಜಾತಿ, ಧರ್ಮಕ್ಕೆ ಸೇರಿದೆ, ಎಲ್ಲಾರೂ ತೆರಿಗೆ ಕಟ್ಟುತ್ತಾರೆ, ಆದರೆ ರಾಜ್ಯ ಮುಖ್ಯಮಂತ್ರಿಗಳ ಕೇವಲ ಹಿಂದೂ ಯುವಕರಿಗೆ ಮಾತ್ರ ಪರಿಹಾರ ಘೋಷಣೆ ಮಾಡಿರುವುದು ಖಂಡನೀಯವಾಗಿದ್ದೆ ಎಂದು ಅಂಜುಮಾನ ಕಮಿಟಿಯ ಅಧ್ಯಕ್ಷ ಹಾಗೂ ಜೆಡಿಎಸ್ ಯುವ ಮುಖಂಡ ಎಂ.ಡಿ.ವಲಿಸಾಬ ಗುತ್ತೆದಾರ ಆರೋಪಿಸಿದ್ದಾರೆ.
ಈ ಕುರಿತು ಸಂಜೆವಾಣಿಯೊಂದಿಗೆ ಈ ಕುರಿತು ಮಾತನಾಡಿದ ಅವರು ಯಾವುದೇ ರಾಜಕಾರಣಿಗಳಾಗಲಿ ಚುನಾವಣೆ ಪೂರ್ವದಲ್ಲಿ ಪಕ್ಷದ ಅಭ್ಯರ್ಥಿಯಾಗಿರುತ್ತಾರೆ. ಚುನಾವಣೆ ನಂತರ ಅವರು ಎಲ್ಲಾರಿಗೂ ಸೇರುವ ವ್ಯಕ್ತಿಯಾಗಿರುತ್ತಾರೆ. ಮತ್ತಿತರ ಕಡೆ ಹಿಂದೂ ಮುಸ್ಲಿಂ ಯುವಕರ ಹತ್ಯೆ ಘಟನೆಗೆ ಸಂಬಂದಿಸಿದಂತೆ ಅವರ ಕುಟುಂಬಗಳಿಗೆ ಸಮಾನವಾಗಿ ಸರ್ಕಾರದಿಂದ ಪರಿಹಾರ ನೀಡಬೇಕು. ಸರ್ಕಾರ ಪರಿಹಾರ ನೀಡುವುದು ಜನರು ಪಾವತಿ ಮಾಡಿದ ತೆರಿಗೆ ಹಣದಿಂದ ಎಂಬುದು ಎಲ್ಲಾರಿಗೂ ತಿಳಿದಿರುವ ವಿಷಯ. ಸರ್ಕಾರಕ್ಕೆ ಕೇವಲ ಹಿಂದುಗಳು ಮಾತ್ರ ತೆರಿಗೆ ಕಟ್ಟುವುದಿಲ್ಲ.
ಪ್ರತಿಯೊಬ್ಬರೂ ಒಂದಿಲ ಒಂದು ರೀತಿಯಲ್ಲಿ ತೆರಿಗೆ ಕಟ್ಟುತ್ತಾರೆ. ಪ್ರಾಣಕ್ಕೆ ಪರಿಹಾರ ಕೊಡುವುದು ಸರಿಯಾದ ಕ್ರಮವಲ್ಲ, ಮೃತರ ಕುಡುಂಬಕ್ಕೆ ಆರ್ಥಿಕವಾಗಿ ಸಹಾಯವಾಗಲೆಂದು ಪರಿಹಾರ ನೀಡಲಾಗುತ್ತದೆ. ಆದರೆ ಪ್ರವೀಣ ಗಡಿಯಲ್ಲಿ ಹೋರಾಡಿ ಪ್ರಾಣ ಬಿಟ್ಟಿದಾನೆಯೆ. ಇತ್ತರರು ದೇಶ ದ್ರೋಹ ಮಾಡಿದ್ದಾರೆಯೆ ಎಂದು ಪ್ರಶ್ನಿಸಿದ ಅವರು ಮುಖ್ಯಮಂತ್ರಿಗಳು ರಾಜ್ಯಕ್ಕೆ ಮುಖ್ಯಮಂತ್ರಿಯೋ ಅಥವಾ ಹಿಂದು ಸಂಘಟನೆಗಳಿಗೆ ಮುಖ್ಯಮಂತ್ರಿಯಾಗಿದ್ದಾರೆಂಬುದುಕ್ಕೆ ಹಿಂದು ಯುವಕ ಪ್ರವೀಣ ಹತ್ಯೆಗೆ ಸರ್ಕಾರದಿಂದ ೨೫ ಲಕ್ಷ ಪರಿಹಾರ ಘೋಷಣೆ ಮಾಡಿರುವುದು ಖಂಡನೀಯವಾಗಿದೆ.
ಹತ್ಯಗೀಡಾದ ಎಂ.ಡಿ.ಮಸ್ಸೂದ್, ಎಂ.ಡಿ ಫಾಯಜ್ ಪ್ರಾಣಕ್ಕೆ ಬೆಲೆ ಇಲ್ಲವೆ. ಈ ದೇಶದಲ್ಲಿ ಮುಸ್ಲಿಂರು ತೆರಿಗೆ ಕಟ್ಟುವುದಿಲಗಲವೆ. ಮುಖ್ಯಮಂತ್ರಿಗಳು ತಮ್ಮ ಪದವಿ ಹೋಗುತ್ತದೆ ಎಂದು ಹತ್ಯೆಗಿಡಾದ ಮುಸ್ಲಿಂ ಕುಟುಂಬಕ್ಕೆ ಸಾಂತ್ವಾನ ಹೇಳಲು ಹೋಗದೆ ಇರಬಹುದು, ಆದರೆ ಒಬ್ಬರಿಗೆ ಪರಿಹಾರ ಕೊಟ್ಟು ಇಬ್ಬರೂ ಮುಸ್ಲಿಂ ಎಂದು ಪರಿಹಾರ ನೀಡದೆ ಇರುವುದು ಖಂಡನೀಯವಾಗಿದೆ. ಸರ್ಕಾರ ಎಲ್ಲಾರಿಗೂ ಸೇರಿದ್ದಾಗಿದೆ. ಈ ಎರಡು ಕುಟಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದರು.