ಹತ್ತು ವರ್ಷದಲ್ಲಿ ಸುಮಾರು ಕೆಲಸಗಳು ಡಬ್ಲಿಂಗ್ ಆಗಿವೆ: ಶಾಸಕ ನೇಮಿರಾಜ್ 


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ, ಆ,24 ಕಳೆದ ಹತ್ತು ವರ್ಷ ಕ್ಷೇತ್ರದಲ್ಲಿ ಸುಮಾರು ಕೆಲಸಗಳು ಡಬ್ಲಿಂಗ್ ಆಗಿವೆ ಎಂದು ಶಾಸಕ ಕೆ ನೇಮಿರಾಜ್ ನಾಯ್ಕ್ ಬೇಸರ ವ್ಯಕ್ತಪಡಿಸಿದ್ದರು
 ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಉದ್ಯೋಗ ಖಾತ್ರಿ, ಬದುಕು ಖಾತ್ರಿ, ಸೇವೆ ಮತ್ತು ಸೂರು’ ಶೀರ್ಷಿಕೆಯಡಿ ಅಭಿಯಾನದಡಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಹಿಂದೆ ಯಾವುದೋ ಅನುದಾನವನ್ನು ಯಾವುದಕ್ಕೂ ಮಿಕ್ಸ್ ಮಾಡಿ ಕೆಲಸ ಮಾಡಿ ಗೋಲ್ ಮಾಲ್ ಮಾಡಿರುವುದು ಕಂಡು ಬಂದಿದೆ. ಮುಂದೆ ಈ ರೀತಿ ಕೆಲಸಗಳು ಆಗೋಕೂಡದು. ನಮಗೆ ಪಕ್ಕ ಮಾಹಿತಿ ಜೊತೆಗೆ ಕೆಲಸ ಕೂಡ ಆಗಿರಬೇಕು ನರೇಗಾದ ಅಡಿಯಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು. ಉಂಡಾಗುತ್ತಿಗೆ ನನ್ನತ್ರ ನಡೆಯುವುದಿಲ್ಲ ನಾನು ಪಕ್ಕ ಪ್ರಾಕ್ಟಿಕಲ್ ಮನುಷ್ಯ ಪಾರ್ಟಿ ಪಕ್ಷ ಪಂಗಡ ಏನು ನಾನು ನೋಡುವುದಿಲ್ಲ ಜನರ ಹಿತ ಕಾಪಾಡುವುದು ನಮ್ಮ ಕರ್ತವ್ಯ ನೀವು ರಾಜಕೀಯ ಬಿಟ್ಟು ಜನಪರ ಕೆಲಸ ಮಾಡಿ ನಮ್ಮ  ಸಹಕಾರ ಯಾವಾಗಲೂ ಇರುತ್ತದೆ
ತಪ್ಪು ಮಾಡಿದರೇ, ಮೀನ ಮೇಷ ಮಾಡಿದರೇ, ಜನರಿಗೆ ಕಾಡಿಸಿ, ಪೀಡಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒಗಳಿಗೆ ಎಚ್ಚರಿಸಿದರು
ಒಂದು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಠ ಪಕ್ಷ ಎರಡು ಕೋಟಿರೂಪಾಯಿ ಮೊತ್ತದಷ್ಟು ಕಾಮಗಾರಿಯನ್ನು ಅನುಷ್ಠಾನಕ್ಕೆ ತರಲು ಖಾತ್ರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ, ಹಳ್ಳಿಗಾಡಿನ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಉನ್ನತ್ತಿಕರಣಗೊಳಿಸಲು ಅನುಕೂಲವಾಗುವಂತೆ ಅತ್ಯಂತ ವಸ್ತು ನಿಷ್ಠವಾಗಿಯೇ ಕ್ರೀಯಾಯೋಜನೆಯನ್ನು ರೂಪಿಸುವಂತೆ ಶಾಸಕರು ಸೂಚಿಸಿದರು.
ಗ್ರಾಮಗಳಲ್ಲಿ ಸಾಕಷ್ಟು ಪೋತಿ ಕೇಸ್ ಗಳಿವೆ. ಅವುಗಳಲ್ಲಿ ಬಹುತೇಕ ಪ್ರಕರಣಗಳು ಪಂಚಾಯ್ತಿ ಗಮನಕ್ಕೇನೆ ಬರುವುದಿಲ್ಲ. ಈ ರೀತಿಯಾದಾಗ ಪೋತಿ ವಾರಸುದಾರರಿಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಕಷ್ಟು ಅನಾನುಕೂಲವಾಗಲಿದೆ. ಪೋತಿ ದಾಖಲಾತಿ ಸಣ್ಣ ವಿಚಾರವೇ ಆಗಿದ್ರು ಅದು ಹತ್ತಾರು ಸರ್ಕಾರಿ ಸೌಲಭ್ಯಗಳಿಗೆ ಲಿಂಕ್ ಆಗಲಿದೆ. ಅದ್ದರಿಂದ ಇದನ್ನು ನಿರ್ಲಕ್ಷ್ಯ ಮಾಡಬೇಡಿ ಎಂದರು.
ವಲ್ಲಾಭಾಪುರ ಪಂಚಾಯ್ತಿಗೆ ಸೇರಿದ ಬೋರ್ ವೆಲ್ ನ ರೈಸಿಂಗ್ ಮೇನ್ ನಿಂದಲೇ ಖಾಸಗಿ ಇಟ್ಟಿಗೆ  ಘಟಕಕ್ಕೆ ಆಕ್ರಮವಾಗಿ ನೀರನ್ನು ತೆಗೆದುಕೊಳ್ಳತ್ತಿದ್ದಾರೆಂದು ಅಲ್ಲಿನ ಗ್ರಾಮಸ್ಥರು ನಮ್ಮ ಗಮನಕ್ಕೆ ತಂದಿದ್ದಾರೆ ನೀರು ಒದಗಿಸುವುದು ಕಂಡು ಬಂದರೆ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣದ ದಾಖಲಿಸಲಾಗುವುದು ಎಂದು ಎಚ್ಚರಿಸಿದರು .
 ತಾಲೂಕಿನಲ್ಲಿ 7922 ಜನರಿಗೆ ವಸತಿ 3123 ಜನರಿಗೆ ನಿವೇಶನ ಇಲ್ಲ ಎಂದು ತಾ ಪಂ ಇ ಒ ಪರಮೇಶ್ವರಪ್ಪ ತಿಳಿಸಿದರು.
 ಈ ಸಂದರ್ಭದಲ್ಲಿ ಹೊಸಪೇಟೆ ತಾಪಂ ಇಒ  ಉಮೇಶ್,  ಉದ್ಯೋಗ ಖಾತ್ರಿ ಎಡಿ ರಮೇಶ ಮಹಾಲಿಂಗಾಪುರ, ಕೊಟ್ಟೂರು ತಾಪಂ ವ್ಯವಸ್ಥಾಪಕಿ ಪುಷ್ಪಾಲತಾ, ತಾಪಂನ ವಿಜಯಕುಮಾರ, ಶಾಸಕರ ಆಪ್ತ ಸಹಾಯಕ ದೊಡ್ಡ ಬಸಪ್ಪ ರೆಡ್ಡಿ, ಇದ್ದರು

One attachment • Scanned by Gmail