ಹತ್ತು ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಸಾಧನೆ ಶೂನ್ಯ: ಕೆರೆಹಳ್ಳಿ ನವೀನ್

ಸಂಜೆವಾಣಿ ವಾರ್ತೆ
ಚಾಮರಾಜನಗರ ಏ.11- ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಸಾಲದ ಪ್ರಮಾಣ ದುಪ್ಪಟ್ಟು ಮಾಡಿದ್ದು, ಅಗತ್ಯವಸ್ತುಗಳ ಬೆಲೆಏರಿಕೆ ಮಾಡಿದ್ದೇ ಸಾಧನೆಯಾಗಿದೆ. ದೇಶದ ಅಭಿವೃದ್ದಿ ವಿಚಾರದಲ್ಲಿ ಬಿಜೆಪಿಯದು ಏನೇನೂ ಇಲ್ಲ ಎಂದು ಚಾಮರಾಜನಗರ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಹಾಗೂ ಜಿ.ಪಂ. ಮಾಜಿ ಸದಸ್ಯ ಕೆರಹಳ್ಳಿ ನವೀನ್ ದೂರಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಪತ್ತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಅವಧಿಯಲ್ಲಿ ವಿದೇಶದಲ್ಲಿರುವ ಕಪ್ಪು ಹಣತಂದು ದೇಶದ ಪ್ರತಿಯೊಬ್ಬರ ಖಾತೆಗೆ 15ಲಕ್ಷ ರೂ.ಗಳನ್ನು ಹಾಕುವುದಾಗಿ ಹೇಳಿದ್ದರು. ಒಂದು ರೂಪಾಯಿ ಬಡವರ ಬ್ಯಾಂಕ್ ಖಾತೆಗೆ ಬರಲಿಲ್ಲ. 128 ಲಕ್ಷ ಕೋಟಿ ಆದಾಯ ಬಂದಿದೆ. ಆದರೆ ಸಾಲದ ಪ್ರಮಾಣ ಮಾತ್ರ ಏರುತ್ತಲೇ ಇದೆ. ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಮನಮೋಹನ್‍ಸಿಂಗ್ ಅವರು ಪ್ರದಾನಿಯಾಗಿದ್ದ ವೇಳೆ ರೈತರ 75 ಸಾವಿರ ಕೋಟಿ ಮನ್ನಾ ಮಾಡಿದ್ದರು ಎಂದರು.
ಪ್ರಧಾನಿ ಮೋದಿ ಅವರು ಕಳೆದ 10 ವರ್ಷಗಳ ಅವಧಿಯಲ್ಲಿ ಸಾಲ ಮನ್ನಾ ಮಾಡುವ ಮಾತಿರಲಿ, ದೆಹಲಿ ಗಡಿಯಲ್ಲಿ ಹಕ್ಕು ಕೇಳಲು ಹೋದ ರೈತರ ಹೋರಾಟವನ್ನು ಹತ್ತಿಕುವ ಕೆಲಸವನ್ನು ಮಾಡಿದರು. ಇನ್ನು ರೈತರ ಆದಾಯ ದ್ವಿಗುಣ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
10 ವರ್ಷದ ಅವಧಿಯಲ್ಲಿ ರೈತರ ಅನೂಕೂಲಕ್ಕಾಗಿ ನದಿಜೋಡಣೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದು ಆಗಲಿಲ್ಲ. ಲೋಕಪಾಲ್ ಮಸೂದೆ ಜಾರಿ ಮಾಡಲಿಲ್ಲ. ಭ್ರಷ್ಠಾಚಾರ, ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಹಾಕಿಲ್ಲ. ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳನ್ನು ಒಂದೊಂದಾಗಿ ಖಾಸಗೀಕರಣ ಮಾಡಲಾಗುತ್ತಿದೆ. ಚಾಮರಾಜನಗರ ಲೋಕಸಭೆ ಕ್ಷೇತ್ರದ ಅಭಿವೃದ್ದಿಗೆ ಮೋದಿ ಸರ್ಕಾರ ನಯಾಪೈಸೆ ಅನುದಾನ ನೀಡಿಲ್ಲ. ರಾಜ್ಯ ಹಾಗೂ ದೇಶದ ಜನತೆಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಲು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸುನಿಲ್ ಬೋಸ್ ಅವರನ್ನು ಗೆಲ್ಲಿಸಬೇಕು, 10 ವರ್ಷದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಮಾಡದ ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲಿದ್ದು, ದಿ. ಆರ್. ಧ್ರುವನಾರಾಯಣ್ ಅವರ ಅತ್ಮೀಯ ಗೆಳೆಯ ಎಂದು ಹೇಳಿಕೊಳ್ಳುವ ಬಾಲರಾಜು ಅವರ ನಿಧನದ ಬಳಿಕ ಅವರ ಮಗನಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಯಿತು. ದುಃಖದಲ್ಲಿ ಸ್ನೇಹಿತನ ಮಗನನ್ನು ಗೆಲ್ಲಿಸುವ ಮಾನವೀಯತೆಯನ್ನು ತೋರದ ಬಿಜೆಪಿಗೆ ಹೋದವರು. ಈಗ ಬಿಜೆಪಿಯಲ್ಲಿ ಲೋಕಸಭಾ ಸಭೆ ಟಿಕೆಟ್ ದೊರೆತದಾಗ ಧ್ರುವನಾರಾಯಣ್, ಎಚ್.ಎಸ್. ಮಹದೇವಪ್ರಸಾಧ್ ಅವರ ಸಮಾಧಿಗಳು ನೆನಪಿಗಾಗಿ ಅಲ್ಲಿ ಹೋಗಿ ಕಣ್ಣೀರಿಟ್ಟು, ಅವರ ಅಭಿಮಾನಿಗಳು ಹಾಗು ಅನುಯಾಯಿಗಳು ನನ್ನ ಪರವಾಗಿದ್ದಾರೆ ಎಂದು ತಪ್ಪು ಸಂದೇಶವನ್ನು ಮತದಾರರಿಗೆ ನೀಡುವ ಮೂಲಕ ನೇರವಾಗಿ ಚುನಾವಣೆ ತೋರಿಸಿ, ಬಿಜೆಪಿ ಸಾಧನೆಯನ್ನು ನೋಡಿ ಮತ ಹಾಕಿ ಎಂದು ಹೇಳಿ. ಪಕ್ಷದ ವಿರುದ್ದವಾಗಿ ಎಂದೋ ಹೋಗಬೇಡಿ ಎಂದು ನಮ್ಮ ನಾಯಕರು ಹೇಳಿಕೊಟ್ಟಿದ್ದಾರೆ. ಅವರು ಪಕ್ಷದತÁಯಿ ಇದ್ದಂತೆ, ತಾಯಿಗೆ ದ್ರೋಹ ಮಾಡಬೇಡಿ ಎಂದು ಅವರ ಅನಯಾಯಿಗಳಾದ ನಮಗೆ ಹೇಳಿಕೊಟ್ಟಿದ್ದಾರೆ ಎಂದು ಬಾಲರಾಜ್‍ಗೆ ನವೀನ್ ಟಾಂಗ್ ಕೊಟ್ಟರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್.ಮಹದೇವ್, ತಾಪಂ ಮಾಜಿ ಸದಸ್ಯ ಮಹದೇವಶೆಟ್ಟಿ, ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪು. ಶ್ರೀನಿವಾಸನಾಯಕ, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸಯ್ಯದ್ ಮುಜಾಯಿದ್, ನಟರಾಜು ಹಾಜರಿದ್ದರು.