ಹತ್ತು ಲಕ್ಷಕ್ಕೂ ಅಧಿಕ ಮಂದಿ ಅಮೆರಿಕಾದಲ್ಲಿ ಲಸಿಕೆ

ವಾಷಿಂಗ್ಟನ್, ಡಿ.೨೪-ಅಮೆರಿಕಾದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತರುವಲ್ಲಿ ಪ್ರಮುಖ ಅಡಚಣೆ ದಾಟಿ ಒಂದು ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಕೊರೋನಾ ವೈರಸ್ ಲಸಿಕೆಯ ಮೊದಲ ಎರಡು ಡೋಸ್ ಗಳನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ರಾಷ್ಟ್ರ ವ್ಯಾಪ್ತಿಯಲ್ಲಿ ಈ ವಾರದ ಅಂತ್ಯದ ವೇಳೆಗೆ, ಅಮೆರಿಕಾ ಅಧಿಕಾರಿಗಳು ಎರಡು ಅನುಮೋದಿತ ಲಸಿಕೆಗಳ ಸುಮಾರು ೧೫.೫ ಮಿಲಿಯನ್ ಡೋಸ್‌ಗಳನ್ನು ವಿತರಿಸಿದ್ದಾರೆ
ಎಂದು ವಿತರಣಾ ಅಭಿಯಾನದ ಉಸ್ತುವಾರಿ ವಹಿಸಿಕೊಂಡಿರುವ ಜನರಲ್ ಗುಸ್ಟಾವ್ ಪೆರ್ನಾ ತಿಳಿಸಿದ್ದಾರೆ.

ಮುಂದಿನ ವಾರ ಇನ್ನೂ ೪.೫ ರಿಂದ ೫ ಮಿಲಿಯನ್ ಲಸಿಕೆ ಹಂಚಿಕೆ ಮಾಡುವ ಹಾದಿಯಲ್ಲಿದ್ದೇವೆ, ಇದು ವರ್ಷಾಂತ್ಯದ ಮೊದಲು ಅಮೆರಿಕಕ್ಕೆ ನಿಗದಿಪಡಿಸಿದ ೨೦ ಮಿಲಿಯನ್ ಡೋಸ್ ಲಸಿಕೆಗಳು ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಸರ್ಕಾರದ ಕೋರಿಕೆಯಂತೆ ಲಸಿಕೆ ಅಭಿವೃದ್ದಿ ಸಂಸ್ಥೆಗಳಾದ ಫೈಝರ್ , ಬಯೋಟೆಕ್ ಮತ್ತು ಮಾಡರ್ನಾ ಲಕ್ಷಾಂತರ ಪ್ರಮಾಣದಲ್ಲಿ ಲಸಿಕೆಗಳನ್ನು ಪೂರೈಸಲಿವೆ. ಪ್ರತಿ ಲಸಿಕೆಯನ್ನು ಎರಡು ಹಂತಗಳಲ್ಲಿ ನೀಡಲಾಗುತ್ತಿದೆ.

ಇನ್ನೂ, ಎಲ್ಲರಿಗೂ ಲಸಿಕೆ ಲಭ್ಯವಾಗುವವರೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ರೆಡ್‌ಫೀಲ್ಡ್ ಅಮೆರಿಕನ್ನರನ್ನು ಒತ್ತಾಯಿಸಿದ್ದಾರೆ.