ಹತ್ತು ತಿಂಗಳಲ್ಲೇ ತಂದೆ -ಮಗನನ್ನು ಬಲಿ ಪಡೆದ ಕೊರೋನಾ.

ಕೂಡ್ಲಿಗಿ. ಮೇ. 21 :- ಕಳೆದ ಹತ್ತು ತಿಂಗಳ ಹಿಂದಷ್ಟೇ ಪತ್ರಕರ್ತ ಮಗನನ್ನು ಬಲಿ ಪಡೆದ ಕೊರೋನಾ ಗುರುವಾರ ಬೆಳಿಗ್ಗೆ ತಂದೆಯನ್ನು ಅದೇ ಕೊರೋನಾ ಬಲಿ ಪಡೆದಿದೆ. ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಅನೇಕ ವರ್ಷಗಳ ಕಾಲ ಅಟೆಂಡರ್ ಆಗಿ ಎಲ್ಲರ ಪ್ರೀತಿಗೆ ಪಾತ್ರರಾಗಿ 14 ವರ್ಷದ ಹಿಂದೆ ನಿವೃತ್ತರಾಗಿದ್ದ ಎಂ. ಭೀಮಪ್ಪ (74) ಸೋಮವಾರ ಪಾಸಿಟಿವ್ ಪ್ರಕರಣದಲ್ಲಿ ಕೂಡ್ಲಿಗಿ ಕೋವಿಡ್ ವಾರ್ಡಿಗೆ ದಾಖಲಾಗಿದ್ದು ಗುರುವಾರ ಬೆಳಿಗ್ಗೆ 11-15 ಗಂಟೆಗೆ ತೀವ್ರ ಉಸಿರಾಟದ ತೊಂದರೆಯಿಂದ ನಿಧನರಾಗಿದ್ದು ಅವರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮವಾದ ತಾಲೂಕಿನ ಕುರಿಹಟ್ಟಿಯಲ್ಲಿ ಕೋವಿಡ್ ನಿಯಮದಂತೆ ನಿನ್ನೆ ಮಧ್ಯಾಹ್ನ ನೆರವೇರಿಸಲಾಯಿತು.
ಹತ್ತು ತಿಂಗಳ ಹಿಂದಷ್ಟೇ ಮಗ ಪತ್ರಕರ್ತ ತ್ರಿಮೂರ್ತಿ ಕೊರೋನಾಕ್ಕೆ ಬಲಿಯಾಗಿದ್ದ :- ಪಟ್ಟಣದ 1ನೇ ವಾರ್ಡಿನ ಸದಸ್ಯನಾಗಿ ಹಾಗೂ ಹೊಸದಿಗಂತ ಪತ್ರಿಕೆಯ ಕೂಡ್ಲಿಗಿ ತಾಲೂಕು ವರದಿಗಾರನಾಗಿದ್ದ ಬಿ ಎಂ ತ್ರಿಮೂರ್ತಿ ಇದೇ ಕೊರೋನಾ ಪಾಸಿಟಿವ್ ಬಂದು ಕೂಡ್ಲಿಗಿಯಿಂದ ಬಳ್ಳಾರಿಗೆ ದಾಖಲಾಗಿ ಕಳೆದ ಆಗಷ್ಟ್ ತಿಂಗಳ 17 ನೇ ತಾರೀಕಿನಂದು ಕೊರೋನಾ ಬಲಿ ತೆಗೆದುಕೊಂಡಿತ್ತು ಅದರಂತೆ ಈ ಮಹಾಮಾರಿ ಗುರುವಾರ ತ್ರಿಮೂರ್ತಿ ತಂದೆ ಭೀಮಪ್ಪನನ್ನು ಸಹ ಅದೇ ಕೊರೋನಾ ಬಲಿ ತೆಗೆದುಕೊಂಡಿತು ಮಹಾಮಾರಿ ಸೋಂಕು ಭೀಮಪ್ಪನಿಗೆ ಭಾನುವಾರ ಪಾಸಿಟಿವ್ ವರದಿಯಿಂದ ಆಕ್ರಮಿಸಿಕೊಂಡು ಇದರಿಂದ ಉಸಿರಾಟದ ತೊಂದರೆ ಜಾಸ್ತಿಯಾದ ಆತನನ್ನ ಸೋಮವಾರ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯ ಕೋವಿಡ್ ವಾರ್ಡಿಗೆ ದಾಖಲಿಸಲಾಗಿತ್ತು ಆದರೆ ವಿಧಿಯಾಟ ಎಂಬಂತೆ ಗುರುವಾರ ಬೆಳಿಗ್ಗೆ ತೀವ್ರ ಉಸಿರಾಟದ ತೊಂದರೆಯಿಂದ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಹತ್ತು ತಿಂಗಳ ಅಂತರದಲ್ಲಿ ಮಗ ಮತ್ತು ಪತಿಯನ್ನು ಕಳಕೊಂಡು ಪತ್ನಿ ಮತ್ತು ತಮ್ಮ ಹಾಗೂ ತಂದೆ ಕಳಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತ ಭೀಮಪ್ಪ ಪತ್ನಿ ಹಾಗೂ ಮೂವರು ಮಕ್ಕಳನ್ನು ಮೊಮ್ಮಕ್ಕಳನ್ನು ಬಂಧುಗಳನ್ನು ಅಗಲಿದ್ದಾರೆ.