ಹತ್ತಿ ಸಾಗಿಸುವ ಆಟೋ ಪಲ್ಟಿ

ರಾಯಚೂರು.ನ.07- ರಾಷ್ಟ್ರೀಯ ಹೆದ್ದಾರಿ 167 ರ ಮುಖ್ಯ ರಸ್ತೆಯಲ್ಲಿ ಚಿಕ್ಕ ಆಟೋ ಪಲ್ಟಿಯಾದ ಘಟನೆ ನಡೆದಿದೆ.
ಮಿಟ್ಟಿ ಮಲ್ಕಾಪೂರು ಬಳಿ ಇಂದು ಮುಂಜಾನೆ 8.30 ಕ್ಕೆ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬರುವ ಟಿಪ್ಪರ್ ತಪ್ಪಿಸಲು ಮಾಧವರಂ ಗ್ರಾಮದ ಹತ್ತಿ ಸಾಗಿಸುವ ಆಟೋ ಪಲ್ಟಿಯಾಗಿದೆ. ಚಾಲಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.