ಹತ್ತಿ ಬೆಳೆಯ ವಿಚಾರ ಸಂಕೀರ್ಣ

ರಾಯಚೂರು.ಸೆ.೨೩-ಕೃಷಿ ಮಹಾವಿದ್ಯಾಲಯ ರಾಯಚೂರು ಕೃಷಿ ಅಂತಿಮ ವರ್ಷದ ವಿದ್ಯಾರ್ಥಿ ಕಾರ್ಯಾನುಭವನದ ಶಿಬಿರದ ಅಂಗವಾಗಿ ಯಾಪಲದಿನ್ನಿಯ ಈಶ್ವರ ದೇವಸ್ತಾನದ ಮುಂದೆ ಊರಿನ ಎಲ್ಲಾ ಹತ್ತಿ ಬೆಳೆಯ ಬೀಜ ಉತ್ಪಾದಕ ರೈತರು ಹಾಗೂ ಮಾವು ಮತ್ತು ಮೋಸಂಬಿ ಬೆಳೆಯುವ ರೈತರನ್ನು ಕೂಡಿಸಿ, ಸಂಪನ್ಮೂಲ ವ್ಯಕ್ತಿಗಳ ಜೊತೆ ಸಂವಾದ ನಡೆಸಲಾಯಿತು.
ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾ ಪಕರಾದ ಅಜಯ್ ಕುಮಾರ್ ಸರ್ ಹತ್ತಿಯ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು, ಮತ್ತು ಹತ್ತಿ ಬೀಜ ಉತ್ಪಾದನೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು ಹಾಗೇಯೇ ಈ ಭಾಗದಲ್ಲಿ ಹೆಚ್ಚಾಗಿ ಹತ್ತಿಯಲ್ಲಿ ಕಾಣಿಸಿಕೊಳ್ಳುವ ಗುಲಾಬಿ ಕಾಯಿಕೊರಕದ ಬಗ್ಗೆ ಮತ್ತು SPಐಂಖಿ-PಃW ಪೇಸ್ಟ್ ಮೂಲಕ ಅದನ್ನು ಹೇಗೆ ನಿರ್ವಹಣೆ ಮಾಡಬೇಕೆಂದು ಕೃಷಿ ಮಹಾವಿದ್ಯಾಲಯ ಕೀಟ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಶ್ರಿ ಎ ಜಿ ಶ್ರೀನಿವಾಸ ಸರ್ ಇವರು ವಿವರಿಸಿದರು ಹಾಗೆಯೇ ಹತ್ತಿಯಲ್ಲಿ ಬರುವ ಪ್ರಮುಖ ರೋಗಗಳ ನಿರ್ವಹಣೆ ಬಗ್ಗೆ ಶ್ರಿ ಅಶ್ವತ್ ನಾರಾಯಣ ಸರ್ ಇವರು ರೈತರೊಂದಿಗೆ ಸಂವಾದದ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ವಿಸ್ತರಣಾ ಪ್ರಾದ್ಯಪಕರಾದ ಶ್ರಿ ಶಿವಾನಂದ ಕಮ್ಮಾರ ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.