ಹತ್ತಿ ಬೆಳೆಯ ನೆಕ್ರಾಸಿಸ್ ವೈರಸ್ ರೋಗ ನಿರ್ವಹಣೆ

ಕಲಬುರಗಿ:ಅ.18:ಹತ್ತಿ ಬೆಳೆಯಲ್ಲಿ ಎಲೆ ಮುದುಡಿ ಮತ್ತು ನೆಕ್ರಾಸಿಸ್ ರೋಗ ಅಲ್ಲಲ್ಲಿ ಕಂಡು ಬಂದಿದ್ದು, ಕಲಬುರಗಿ ಜಿಲ್ಲೆಯಲ್ಲಿ ಕಳೆದ 20 ದಿನಗಳಿಂದ ಮಳೆಯ ಕೊರತೆ ಕಂಡು ಬಂದಿದ್ದು. ಥ್ರಿಪ್ಸ್ ರಸ ಹೀರುವ ನುಸಿ ಭಾದೆ, ತಂಬಾಕು ಸ್ಟೀಕ್ ವೈರಸ್ ರೋಗವನ್ನು ಒಂದು ಹತ್ತಿ ಹೊಲದಿಂದ ಇನ್ನೊಂದು ಹತ್ತಿ ಹೊಲಕ್ಕೆ ಪಸರಿಸುತ್ತಿದೆ. ರೋಗ ಪೀಡಿತ ಹತ್ತಿ ಗಿಡಗಳ ಎಲೆಗಳು ಹಸಿರು, ಹಳದಿ ಮಿಶ್ರಿತ ಚುಕ್ಕಿಗಳನ್ನು ಹೊಂದಿದ್ದು, ಎಲೆ ವಿಕಾರತೆಯನ್ನು ಹೊಂದಿರುತ್ತದೆ. ಮೊಗ್ಗು ಕಾಯಿ, ಕೊಂಡಿ ಉದುರುವಿಕೆ ಹಾಗೂ ಕಡಿಮೆ ಫಸಲು ಈ ರೋಗದ ಚಿಹ್ನೆಗಳು. ಈ ರೋಗದ ನಿರ್ವಹಣೆಗೆ ಡೈಯಾಫೆಂತೋರಾನ್ 1ಗ್ರಾ. ಅಥವಾ ಇಮಿಡಾಕ್ಲೋಪ್ರಿಡ್ ಅಥವಾ ಪ್ಲೋನಿಕಾಮಿಡ್ 0.5 (ಅರ್ದ ಮಿ.ಲಿ) ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಎಕರೆಗೆ 8 ರಿಂದ 10 ಹಳದಿ ಮತ್ತು ನೀಲಿ ಅಂಟು ಬಲೆ ಹಾಕಬೇಕು. ಮುಂದಿನ ದಿನಗಳಲ್ಲಿ ಹತ್ತಿ ಬೆಳೆಯುವ ರೈತರು ಹತ್ತಿ ಹೊಲದ ಅಂಚು ಅಥವಾ ಸುತ್ತಲು ಎರಡು ಸಾಲು ಬೆಂಡಿಕಾಯಿ ತರಕಾರಿ ಬೆಳೆ ಹಾಕುವುದು ಉತ್ತಮ. ಎಲೆಗಳಲ್ಲಿ ಜಿಂಕ್ ಮತ್ತು ಮ್ಯಾಗ್ನಿಸಿಯಂ ಪೋಷಕಾಂಶಗಳು ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಡಾ. ರಾಜು ಜಿ. ತೆಗ್ಗಳ್ಳಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಅಥವಾ ಸಸ್ಯ ರೋಗ ತಜ್ಞರಾದ ಡಾ. ಜಹೀರ್ ಅಹೆಮದ್ ಕೆವಿಕೆ, ಕಲಬುರಗಿ ಅಥವಾ ಡಾ. ಶ್ರೀನಿವಾಸ ಬಿ.ವಿ (ಮಣ್ಣು ವಿಜ್ಞಾನಿ) ಇವರನ್ನು ಸಂಪರ್ಕಿಸಬಹುದು.