ಹತ್ತಿ ಬೆಳೆಯಲ್ಲಿ ಹಸಿ ನೆಟೆ ನಿರ್ವಹಣೆ

ಕಲಬುರಗಿ:ಸೆ.9: ಜಿಲ್ಲೆಯಲ್ಲಿ ಅಗಸ್ಟ್ ತಿಂಗಳಲ್ಲಿ ಮಳೆಯ ಕೊರತೆ ನಂತರ ಇತ್ತಿಚೀಗೆ ವಿವಿಧ ಭಾಗಗಳಲ್ಲಿ ಸೆಪ್ಟೆಂಬರ್ 03 ರಿಂದ 05 ರವರೆಗೆ ಸುರಿದ ಮಳೆಯ ನಂತರ ಹತ್ತಿ ಅಲ್ಲಲ್ಲಿ ಹಸಿಯಾಗಿ ಸೊರಗಲಾರಂಭಿಸಿದ್ದು, ಹತ್ತಿ ಬೆಳೆದ ರೈತರಿಗೆ ಹವಾಮಾನ ಬದಲಾವಣೆ ವ್ಯಾಪಕ ತೊಂದರೆಯಾಗುತ್ತಿದೆ. ಈ ಸಮಸ್ಯಯನ್ನು ಹತ್ತಿಯ ಪಾರಾವಿಲ್ಟ್ ಎಂದು P್ಪರೆಯಲಾಗುತ್ತಿದೆ. ಭೂಮಿಯಲ್ಲಿ ಅತಿಯಾದ ಮಳೆಯ ನೀರು ಬಸಿದುಹೋಗುವಂತೆ ಬಸಿಗಾಲುವೆ ನಿರ್ಮಿಸುವುದು, ಕಾಪರ್ ಆಕ್ಸಿಕ್ಲೋರೈಡ್ 25 ಗ್ರಾ. ಮತ್ತು ಬೇವು ಮಿಶ್ರಿತ ಯೂರಿಯಾ 3 ಗ್ರಾ. 10 ಲೀಟರ್ ನೀರಿನಲ್ಲಿ ಬೆರೆಸಿ ಬಡ್ಡೆ ಭಾಗ ನೆನೆಯುವಂತೆ ಮಾಡಿ ಸಿಂಪಡಿಸುವುದು ಅಥವಾ ಕಾರ್ಬನ್‍ಡೈಜಿಂ 20ಗ್ರಾ. ಹಾಗೂ ಯೂರಿಯಾ 100ಗ್ರಾ. ಪ್ರತಿ 10 ಲೀಟರ್ ನೀರಿಗೆ ಬೆರೆಸಿ ಬುಡಭಾಗ ಮತ್ತು ಕವಲುಗಳು ನೆನೆಯುವಂತೆ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಆಳಂದ ರಸ್ತೆಯಲ್ಲಿರುವ ಐಸಿಎಆರ್ – ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ರಾಜು ತೆಗ್ಗಳ್ಳಿ ಮತ್ತು ಸಸ್ಯರೋಗ ತಜ್ಞರಾದ ಡಾ. ಜಹೀರ್ ಅಹೆಮದ್ ಅಥವಾ ರೈತರು ತಮ್ಮ ಸಮೀಪದ ಹೋಬಳಿಯ ರೈತ ಸಂರ್ಪಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಬಿಸಿಲಿನ ಅವಧಿಯಲ್ಲಿ ಬೆಳೆಯ ಸಾಲಿನಲ್ಲಿ ಎಡೆಕುಂಟೆ ಹೊಡೆವುದರಿಂದ ಗಿಡದ ಉಸಿರಾಟ ಕ್ರೀಯೆಗೆ ಸಹಕಾರಿಯಾಗಲಿದೆ.