ಹತ್ತಿ ಬೆಂಬಲ ಬೆಲೆ: ರೈಲು ತಡೆ ಚಳುವಳಿ

ರಾಯಚೂರು.ನ.19- ಒಂದು ವಾರದ ಒಳಗೆ ಹತ್ತಿ ಬೆಳೆಗೆ ಬೆಂಬಲ ಬೆಲೆ ಕ್ವಿಂಟಲ್ ಗೆ ಕನಿಷ್ಠ 8500 ರೂ ಘೋಷಿಸದಿದ್ದರೆ ತಾಲೂಕಿನ ಮಟಮಾರಿ ರೈಲ್ವೆ ಸ್ಟೇಷನ್ ವೃತ್ತದಲ್ಲಿ ರೈಲು ರೋಕೋ ಚಳುವಳಿ ಅಮ್ಮಿಕೊಳ್ಳಲಾಗುತದೆ ಎಂದು ಜಿಲ್ಲಾ ಹತ್ತಿ ಬೆಳೆಗಾರರ ರೈತರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎಸ್.ಚಿನ್ನಯ್ಯ ನಾಯಕ ಅವರು ಹೇಳಿದರು.
ಅವರಿಂದು ಸುದ್ದಿಗರೊಂದಿಗೆ ಮಾತನಾಡುತ್ತ ಜಿಲ್ಲೆಯಲ್ಲಿ ಸಾಕಷ್ಟು ರೈತರು ಹತ್ತಿಬೆಳೆಯನ್ನು ಬೆಳೆಯುತ್ತಿದ್ದು ಆದರೆ ಸೂಕ್ತ ಬೆಂಬಲ ಬೆಲೆ ದೊರೆಯುತ್ತಿಲ್ಲ ಈಗಾಗಲೇ ರೈತರು ಅಲವರು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ.
ಹಿಂದಿನ ಜಿಲ್ಲಾಧಿಕಾರಿ ದಿ. ಎಸ್.ಎನ್.ನಾಗರಾಜ ಅವರ ನೇತೃತ್ವದಲ್ಲಿ ಸಾಕಷ್ಟು ರೈತರ ಸಭೆಯನ್ನು ಕರೆದು ಎಪಿಎಂಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳತಿದ್ದರು.ರೈತರ ಹತ್ತಿಬೆಳೆಯನ್ನು ಬೆಂಬಲ ಬೆಲೆಯನ್ನು ನೀಡಿ ಕನಿಷ್ಠ 6500 ರಿಂದ 8500 ವರೆಗೆ ಹತ್ತಿ ಬೆಳೆಗೆ ಬೆಂಬಲ ಬೆಲೆ ಘೋಷಿಸುವಲ್ಲಿ ಮತ್ತು ಕರಿದಿಸುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಇಂದು ದಲ್ಲಾಳಿಗಳಿಂದ ರೈತರಿಗೆ ತೀವ್ರ ತೊಂದರೆ ಯಾಗಿದೆ, ಅದರಿಂದ ಕೊಡಲೇ 8 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳು ಮತ್ತು ಎಪಿಎಂಸಿ ಅಧಿಕಾರಿಗಳು ರೈತರ ಸಭೆಗಳನ್ನು ಕರೆದು ಚರ್ಚೆ ಮಾಡಿ ಸಿಸಿಐ ಹತ್ತಿ ಕೇಂದ್ರವನ್ನು ಪ್ರಾರಂಭಿಸಿ ಕ್ವಿಂಟಲಗೆ 6500ರಿಂದ 8500 ವರೆಗೆ ಬೆಂಬಲ ಬೆಲೆ ಘೋಷಿಸದಿದ್ದರೆ,ಜಿಲ್ಲೆಯ 150 ಹಳ್ಳಿಯ ಜನರಿಂದ ಮಾಟಮಾರಿ ಗ್ರಾಮದ ರೈಲ್ವೆ ಸ್ಟೇಷನ್ ಅಲ್ಲಿ ರೈಲು ರೋಕೋ ಚಳುವಳಿ ಅಮ್ಮಿಕೊಳ್ಳಲಾಗುತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜಶೇಖರಪ್ಪ,ಗೋವಿಂದ, ದೊಡ್ಡ ನರಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.