ಹತ್ತಿ ಬೆಂಬಲ ಬೆಲೆ: ಜೆಡಿಎಸ್ ಹೋರಾಟಕ್ಕೆ ಸಂದ ಜಯ

ರಾಯಚೂರು,ಜ.೧೪- ಜಿಲ್ಲಾ ಜೆಡಿಎಸ್, ರಾಯಚೂರು ಗ್ರಾಮಾಂತರ ಕ್ಷೇತ್ರ ಜೆಡಿಎಸ್ ಮತ್ತು ದೇವದುರ್ಗ ತಾಲೂಕು ಜೆಡಿಎಸ್ ಪಕ್ಷದಿಂದ ಹತ್ತಿ ಬೆಲೆ ನಿಗದಿ ಮಾಡುವಂತೆ ಹೋರಾಟ ಮಾಡಲಾಗಿತ್ತು ತಕ್ಷಣವೇ ರೈತರ ಸಂಕಷ್ಟಕ್ಕೆ ಸ್ಪಂದಿಸಿ, ಬೆಲೆ ನಿಗದಿತ ಮಾಡುವಂತೆ ಒತ್ತಾಯ ಮಾಡಲಾಗಿತ್ತು.
ರಾಯಚೂರು ಜಿಲ್ಲಾಧಿಕಾರಿಯ ರೈತರ ಜೊತೆ ಚರ್ಚಿಸಿ ಪ್ರತಿ ಕ್ವಿಂಟಾಲ್‌ಗೆ ೯೫೦೦ ರೂ ನಿಗದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಅದು ತಕ್ಷಣವೇ ಜಾರಿಗೆ ಬರಬೇಕು ಒಂದು ವೇಳೆ ಬೆಂಬಲ ಬೆಲೆ ನಿಗದಿಯಾಗಿದ್ದರೆ ಮತ್ತೆ ಜೆಡಿಎಸ್ ಪಕ್ಷದಿಂದ ರೈತರ ಜೊತೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎನ್.ಶಿವಶಂಕರ ವಕೀಲರು ಜಿಲ್ಲಾ ಕಾರ್ಯಧ್ಯಕ್ಷ ಜೆಡಿಎಸ್ ಪಕ್ಷ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.