ಹತ್ತಿ ದರ ನಿಗದಿಗೆ ಕಿಸಾನ್ ಸಂಘ ಒತ್ತಾಯ

ರಾಯಚೂರು,ಜ.೦೩- ಮಾರುಕಟ್ಟೆಯಲ್ಲಿ ಹತ್ತಿ ದರ ತೀವ್ರ ಕುಸಿತದಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಪ್ರತಿ ಕ್ವಿಂಟಲ್ ೧೨ ಸಾವಿರ ದರ ನಿಗದಿ ಪಡಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿ ಒತ್ತಾಯಿಸಿದರು.ಮುಂಗಾರು ಮಳೆಗೆ ಜಿಲ್ಲೆಯಲ್ಲಿ ರೈತರು ಹೆಚ್ಚು ಹತ್ತಿ ಬೆಳೆದಿದ್ದು, ಇಲಾಖೆಯ ವರದಿ ಪ್ರಕಾರ ೧.೨೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಿಲ್ಲೆಯ ರೈತರು ಹತ್ತಿ ಬೆಳೆ ಬೆಳದಿದ್ದಾರೆ. ಎಕರೆಗೆ ಸರಾಸರಿ ೨೦ ರಿಂದ ೨೫೦೦೦ ಖರ್ಚು ಮಾಡಿ ರೈತರು ಹತ್ತಿ ಬೆಳೆ ಬೆಳದಿದ್ದು. ಪ್ರಸ್ತುತ ಸಾಲಿನಲ್ಲಿ ಅಕಾಲಿಕ ಮಳೆಯ ಕಾರಣದಿಂದಾಗಿ, ಕೊಳೆರೋಗ, ಕೀಟಭಾದ, ಟೋಬ್ಯಾಕೋ ವೈರಸ್, ಮತ್ತು ಜಿಲ್ಲೆಯಲ್ಲಿ ವಿತರಣೆಯಾದ ನಕಲಿ ಬಿತ್ತನೆ ಬೀಜ ಕಾರಣಗಳಿಂದಾಗಿ ರೈತರಿಗೆ ಸರಿಯಾದ ಫಸಲು ಬಂದಿರುವುದಿಲ್ಲ.ಈಗಾಗಲೇ ರೈತರಿಗೆ ಬೆಳೆ ನಷ್ಟದಿಂದ ರೈತರು ಸಂಕಷ್ಟದಲ್ಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಹತ್ತಿ ಬೆಳೆಗೆ ೫೫೦೦ ರೂ ಯಿಂದ ೬೫೦೦ ರೂಪಾಯಿ ಮಾರುಕಟ್ಟೆ ಬೆಲೆ ಕುಸಿತದಿಂದ ರೈತರು ಹತ್ತಿ ಬೆಳೆಗೆ ಖರ್ಚು ಮಾಡಿದ ಹಣ ವಾಪಸ್ ಬರುವುದು ಕಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಯ ಎಲ್ಲಾ ತಾಲೂಕ ಕೇಂದ್ರಗಳಲ್ಲಿ ಹತ್ತಿ ಖರೀದಿ ಕೇಂದ್ರ ಸ್ಥಾಪನೆ ಮಾಡಿ, ಕೇಂದ್ರ ಸರ್ಕಾರದ ಸಿಸಿಐ ಸಂಸ್ಥೆಗೆ ಹತ್ತಿ ಬೆಳೆಗೆ ಕ್ವಿಂಟಲ್ ಗೆ ೧೨ ಸಾವಿರ ರೂ ಮಾರುಕಟ್ಟೆ ದರ ನಿಗದಿ ಮಾಡಲು ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡಿ ರೈತರಿಗೆ ಸೂಕ್ತ ನ್ಯಾಯಾಯುತ ವೈಜ್ಞಾನಿಕ ಬೆಲೆ ದೊರಕುವಂತೆ ಮಾಡಿ ರೈತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಂಗನಾಥ ಪಾಟೀಲ್, ಮಂಜುನಾಥ ದಳವಾಯಿ, ಕೊಂಡ ರಾಜು, ಗುಳಪ್ಪಗೌಡ, ಶಂಕರಪ್ಪ ಗೌಡ ಸೇರಿದಂತೆ ಉಪಸ್ಥಿತರಿದ್ದರು.