ಹತ್ತಿ ದರ ನಿಗದಿಗೆ ಕಾಂಗ್ರೆಸ್ ಪ್ರತಿಭಟನೆ

ರಾಯಚೂರು,ಜ.೦೪- ತಾಲೂಕು ಕೇಂದ್ರಗಳಲ್ಲಿ ಹತ್ತಿ ಖರೀದಿ ಕೇಂದ್ರಗಳನ್ನು ಕೂಡಲೇ ಪ್ರಾರಂಭಿಸಿ ಪ್ರತಿ ಕ್ವಿಂಟಲ್‌ಗೆ ರೂ.೧೨, ಸಾವಿರ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮಾರುಕಟ್ಟೆಯಲ್ಲಿ ಹತ್ತಿ ದರ ಕುಸಿದು ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲಿಕಿದ್ದಾರೆ. ಅಕಾಲಿಕ ಮಳೆಯಿಂದ ಹತ್ತಿ ಬೆಳೆ ಸಂಪೂರ್ಣ ನಾಶವಾಗಿ ಕೊಳೆತು ಹೋಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹತ್ತಿ ದರ ೬ ಸಾವಿರ ಕ್ಕೆ ಇಳಿಕೆಗೊಂಡು ರೈತರು ಕಂಗಾಲು ಆಗಿದ್ದಾರೆ. ಕೃಷಿ ಕಾರ್ಮಿಕರ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ತಿಂಗಳುಗಟ್ಟಲೇ ಬೆವರು ಸುರಿಸಿ ಬೆಳೆದ ಬೆಳೆಯನ್ನು ಕೇವಲ ಮೂರು ಕಾಸಿಗೆ ಬೀದಿ ಪಾಲಾಗುವಂತೆ ಮಾಡುಲಾಗುತ್ತಿದೆ. ತಕ್ಷಣವೇ ರೈತರಿಗೆ ಅನುಕೂಲಕ್ಕಾಗಿ ೧೨ ಸಾವಿರ ಬೆಲೆ ನಿಗದಿ ಪಡಿಸುವಂತೆ ಒತ್ತಾಯಿಸಿದರು.
ಕಳೆದ ೨ ತಿಂಗಳ ಹಿಂದೆ ೧೦ ಲಿಂದ ೧೨ ಸಾವಿರ ಇದ್ದ ಬೆಲೆಯನ್ನು ಇದೀಗ ಕೇವಲ ೬ ರಿಂದ ೭ ಸಾವಿರಕ್ಕೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ತಾವು ಬೆಳೆ ಬೆಳೆಯಲು ಮಾಡಿದ ಖರ್ಚು ಸಹ ಕೈಗೆ ಬರದಂತಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಈ ರೀತಿಯ ಅನ್ಯಾಯ ಅನ್ನದಾತರು ಅನುಭವಿಸುತ್ತಿದ್ದಾರೆ. ಇದು ಸರ್ಕಾರಕ್ಕೆ ಗೊತ್ತಿದ್ದು ಸಹ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದೆ ಬಿಜೆಪಿ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಕೇಂದ್ರಗಳಲ್ಲಿ ಹತ್ತಿ ಖರೀದಿ ಕೇಂದ್ರಗಳನ್ನು ಕೂಡಲೇ ಪ್ರಾರಂಭಿಸಿ, ಪ್ರತಿ ಕ್ವಿಂಟಲ್‌ಗೆ ೧೨ ರೂ ಸಾವಿರ ಬೆಲೆ ನಿಗಡಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ ನಾಯಕ್, ಜಿಂದಪ್ಪ, ಅಶೋಕ, ಅಜ್ಮಿರ್, ಶ್ರೀನಿವಾಸ್ ರೆಡ್ಡಿ, ಹರಿಚಂದ್ರರೆಡ್ಡಿ, ಗೋವಿಂದ, ಸೇರಿದಂತೆ ಉಪಸ್ಥಿತರಿದ್ದರು.