ಹತ್ತಿ ಕಾರ್ಖಾನೆ : ಅಗ್ನಿ ಅವಘಡ – ೮೫ ಲಕ್ಷ ನಷ್ಟ

ರಾಯಚೂರು.ನ.೧೦- ನಗರದ ಹೈದರಾಬಾದ್ ರಸ್ತೆಯಲ್ಲಿರುವ ಜವಾಹಾರ್ ಇಂಡಸ್ಟ್ರಿ ಹತ್ತಿ ಕಾರ್ಖಾನೆಯಲ್ಲಿ ನಿನ್ನೆ ಸಾಯಂಕಾಲ ಸುಮಾರು ೫ ಗಂಟೆಗೆ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ.
ಕಾರ್ಖಾನೆಯಲ್ಲಿರುವ ಸಾಕಷ್ಟು ಪ್ರಮಾಣದಲ್ಲಿ ಹತ್ತಿಬೇಲ್, ಅರಳೆ ಹಾಗೂ ಹತ್ತಿಕಾಳು ಸೇರಿ ಅಂದಾಜು ಸುಮಾರು ೮೫ ಲಕ್ಷ ರೂ. ನಷ್ಟವಾಗಿರುತ್ತದೆ ಎಂದು ಕಾರ್ಖಾನೆಯ ಮಾಲೀಕರಾದ ಶಾಂತಿಲಾಲ್ ಮೂಥಾ ಅವರು ತಿಳಿಸಿದ್ದಾರೆ. ಈ ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕ ದಳದ ಇಲಾಖೆಯ ಸಿಬ್ಬಂದಿ ಅವರು ಸ್ಥಳಕ್ಕೆ ಧಾವಿಸಿ ಬಂದು ಬೆಂಕಿ ನಂದಿಸುವ ಕಾರ್ಯ ನಡೆಸಲಾಯಿತು.