ಹತ್ತಿ, ಕಬ್ಬಿಣದ ರಾಡ್ ಕಳ್ಳತನ: ನಾಲ್ವರ ಬಂಧನ

ಕಲಬುರಗಿ,ಮೇ.4-ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾಡನಾಳ ಮತ್ತು ಹೇರೂರ (ಬಿ) ಗ್ರಾಮಗಳಲ್ಲಿ ರೈತರು ಬಿಡಿಸಿ ಚೀಲಗಳಲ್ಲಿ ತುಂಬಿ ಇಟ್ಟಿದ್ದ ಹತ್ತಿ ಚೀಲ ಕಳ್ಳತನ ಮಾಡಿದ ಮತ್ತು ಫರಹತಾಬಾದ ಗ್ರಾಮದ ರಾಷ್ಟ್ರೀಯ ಹೆದ್ದಾರಿ-50ರ ಪಕ್ಕದಲ್ಲಿ ನಡೆಯುತ್ತಿರುವ ಕಾಮಗಾರಿ ಕೆಲಸದ ಸ್ಥಳದಲ್ಲಿಯ ಕಬ್ಬಿಣದ ರಾಡ್‍ಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಾಡತೆಗನೂರ ಗ್ರಾಮದ ಲಕ್ಷ್ಮಣ ಲಾಲಪ್ಪ, ಶಿವಕುಮಾರ ಪೂಜಾರಿ, ಡಬರಾಬಾದನ ಹುಸೇನ್ ವಲಿ ಅಲಿಯಾಸ್ ಮೈಬೂಬ್, ಬಸವೇಶ್ವರ ಕಾಲೋನಿಯ ಕಾಮಣ್ಣ ಪೂಜಾರಿ ಎಂಬುವವರನ್ನು ಬಂಧಿಸಿ 80 ಸಾವಿರ ರೂಪಾಯಿ ಮೌಲ್ಯದ 12 ಬಂಡಲ್ ಕಬ್ಬಿಣದ ರಾಡ್, ಕಳ್ಳತನ ಕೃತ್ಯಕ್ಕೆ ಬಳಸಿದ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ್ ಸೇರಿ 1.80 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ಕಲಬುರಗಿ ಸಬ್ ಅರ್ಬನ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಡಿ.ಜಿ.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಫರಹತಾಬಾದ ಪೊಲೀಸ್ ಠಾಣೆ ಪಿಐ ಬಾಲಚಂದ್ರ ಲಕ್ಕಂ ಅವರ ನೇತೃತ್ವದಲ್ಲಿ ಪಿಎಸ್‍ಐ ಸೈಯದ್ ಪಟೇಲ್, ಸಿಬ್ಬಂದಿಗಳಾದ ತುಕಾರಾಮ, ಗಡ್ಡೆಪ್ಪ, ಧರ್ಮಣ್ಣ, ವಿಜಯಕುಮಾರ, ಕಲ್ಯಾಣಕುಮಾರ, ಮಹಿಬೂಬ್, ರಾಜಕುಮಾರ ಪವಾರ್ ಅವರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ಅವರು ಶ್ಲಾಘಿಸಿದ್ದಾರೆ.