ಹತ್ತಿಗೂಡುರು:ಜೆಜೆಎಮ್ ರೂ.1.48ಕೋಟಿ ಕಾಮಗಾರಿಗೆ ಭೂಮಿ ಪೂಜೆ

ಶಹಾಪುರ:ಸೆ.11:ಗ್ರಾಮೀಣ ಭಾಗದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಪ್ರಥಮ ಆಧ್ಯತೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆ ಪೂರ್ಣಗೊಳ್ಳಲಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ತಾಲೂಕಿನ ಹತ್ತಿಗುಡೂರ ಗ್ರಾಮದಲ್ಲಿ ರೂ.1 ಕೋಟಿ 48 ವೆಚ್ಚದಲ್ಲಿ ಜಲ ಜೀವನ್ ಮಿಷನ್ ಯೋಜನೆ ಯಡಿಯಲ್ಲಿ 532 ಮನೆಗಳಿಗೆ ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು.
ಗ್ರಾಮದಲ್ಲಿ ಈಗಾಗಲೇ ಎರಡು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದ್ದರೂ ಸಹ ಸಾಕಷ್ಟು ನೀರು ಲಭ್ಯವಾಗದ ಹಿನ್ನಲೆಯಲ್ಲಿ ಉಪಯೋಗವಾಗಿಲ್ಲಾ. ಮುಂದಿನ ದಿನಗಳಲ್ಲಿ ಪೈಪ್‍ಲೈನ್ ಕೆಲಸ ನಡೆದಿದ್ದು ಪೈಪ್‍ಲೈನ್ ಮೂಲಕ ಎರಡೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರೊದಗಿಸುವ ಕೆಲಸ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಮತಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಒದಗಿಸುವ ಕೆಲಸಕ್ಕೆ ಪ್ರಥಮ ಆಧ್ಯತೆ ನೀಡಲಾಗಿದೆ. ಜಲಧಾರೆ ಯೋಜನೆಯ ಕಾಮಗಾರಿಗೆ ಯಾದಗಿರಿ ಜಿಲ್ಲೆ ಆಯ್ಕೆ ಯಾಗಿದ್ದು ಬಹುತೇಕ ಟೆಂಡರ್ ಕೂಡ ನಡೆದಿದೆ. ಹತ್ತಿಗೂಡುರು ಗ್ರಾªುಕ್ಕೆ ಶಾಶ್ವತ ಕುಡಿಯುವ ನೀರು ಹತ್ತಿರದ ಕೃಷ್ಣಪೂರದಿಂದ ಒದಗಿಸುವ ಕೆಲಸ ಆಗಲಿದೆ ಎಂದರು.
ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಮತ್ತು ಕೊಂಗಂಡಿ ಗ್ರಾಮದಲ್ಲಿ 25 ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಹಾಗೂ ಬಹುತೇಕ ಕಡೆ ಭವನಗಳು, ಶಾಲಾ ಕಾಂಪೌಂಡ್ ಸೇರಿದಂತೆ ಇನ್ನಿತರ ಕಾಮಗಾರಿಗಳು ಪ್ರಗತಿಯಲ್ಲಿದ್ದು ಕೆಲವು ಕಾಮಗಾರಿಗಳು ಪೂರ್ಣಗೊಂಡಿದೆ. ಗ್ರಾಮದ ಡಾ. ಬಿ.ಆರ್ ಅಂಬೇಡ್ಕರ್ ನಗರದಲ್ಲಿ ಶಾಲೆಗೆ ಹೆಚ್ಚುವರಿ ಕೋಣೆಗಳ ಮಂಜೂರಾತಿ, ನೀರಿನ ಟ್ಯಾಂಕ್ ಬೋರ್‍ವೆಲ್ ಕೊರೆಯುವುದು ಇನ್ನು ಇತರೆ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮರಿಗೌಡ ಹುಲಕಲ್, ಜಿಪಂ ಮಾಜಿ ಸದಸ್ಯ ಸಿದ್ದಲಿಂಗರೆಡ್ಡಿ ಸಾಹು, ತಾಪಂ ಮಾಜಿ ಸದಸ್ಯ ಬಸವಂತರೆಡ್ಡಿ, ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಟಣಕೇದಾರ, ಉಪಾಧ್ಯಕ್ಷೆ ಸುಧಾ ,ಶಿವುಮಾಹಂತ ಚಂದಾಪುರ, ಶರಣಪ್ಪ ಟಣಕೇದಾರ, ತಿಪ್ಪಣ್ಣ ಘಂಟಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಕ್ಕನಾಗಮ್ಮ, ಅಯ್ಯಣ್ಣ ಮಹಾಮನಿ, ಗುತ್ತಿಗೆದಾರ ಸಿದ್ದಣ್ಣ ಟಣಕೇದಾರ, ಹನುಮಂತ ಕೊಂಗಂಡಿ, ಗುರಪ್ಪ ಸುರಪುರ, ದೇವೆಂದ್ರ ನಾಟೇಕರ್, ಮಲ್ಲಯ್ಯ ಹೊಸ್ಮನಿ, ಅಯ್ಯಳಪ್ಪ ಸಾಧು ಪೀರಪ್ಪ, ಭೀಮರಾಯ ಹೊಸ್ಮನಿ, ಶೇಖಪ್ಪ ಹೊಸ್ಮನಿ, ರಾಮು ಮಡಿವಾಳ, ಶೇಖಪ್ಪ ನಾಟೇಕರ್, ತಿಪ್ಪಣ್ಣ ತಳವಾರ ,ಗುರಪ್ಪ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಇದ್ದರು.