ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶಿ ಪುಸ್ತಕ ವಿತರಣೆ

ಬಳ್ಳಾರಿ ಮಾ 24 : ತಾಲೂಕಿನ ಬಣಾಪುರದ ಸರ್ಕಾರಿ ಪ್ರೌಡಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ. ಪರೀಕ್ಷೆಯಲ್ಲಿ ಯಶಸ್ಸು ಗಳಿಸುವುದರ ಕುರಿತು ನಗರ ಮನಶಾಸ್ತ್ರಜ್ಞ ಡಾ. ಕಲ್ಯಾಣ ಕುಮಾರ್ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೇಯ ಉಪನಿರ್ದೇಶಕಿ (ಅಭಿವೃದ್ದಿ) ಹನುಮಕ್ಕ ಅವರು ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶಿ ಪುಸ್ತಕ ವಿತರಿಸಿದರು.ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಎಂ. ಸಿದ್ದಲಿಂಗ ಮೂರ್ತಿ ಅವರು. ಗಣಿತದಲ್ಲಿ ಸುಲಭವಾಗಿ ಅಂಕಗಳಿಸುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟರು.
ಡಯಟ್‍ನ ಹಿರಿಯ ಉಪನ್ಯಾಸಕ ಪಿ. ಎಂ. ಶಿವಕುಮಾರ ಸ್ವಾಮಿ, ವಲ್ರ್ಡ್ ವಿಸನ್‍ನ ಪ್ರೇಮಲತಾ, ಶಾಲೆಯ ಮುಖ್ಯ ಗುರು ಸವಿತಾ ಕುಮಾರಿ, ಗ್ರಾಮದ ಮುಖಂಡ ನಾಗರಾಜ ಗೌಡ, ಶಾಲೆಯ ಶಿಕ್ಷಕವೃಂದದವರು ಉಪಸ್ಥಿತರಿದ್ದರು.