ಹಣ ಹಂಚಲು ಬಂದವನಿಗೆ ಚಪ್ಪಲಿ ಏಟು

ಬೀದರ:ಎ.18: ರಾಜ್ಯದಲ್ಲಿ ಎರಡು ವಿಧಾನಸಭಾ ಉಪಚುನಾವಣೆ ಹಾಗೂ ಒಂದು ಲೋಕಸಭಾ ಉಪಚುನಾವಣೆಯ ಮತದಾನ ನಡೆಯುತ್ತಿದೆ. ರಾತ್ರಿ ಮತದಾರರಿಗೆ ಹಣ ಹಂಚಲು ಬಂದ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದು ಕಳಿಸಿರುವ ಘಟನೆ ಬಸವಕಲ್ಯಾಣ ಕ್ಷೇತ್ರದಲ್ಲಿ ನಡೆದಿದೆ.

ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತ್ರಿಪುರಾಂತ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಗ್ರಾಮಸ್ಥರಿಗೆ ಹಣ ಹಂಚಲು ಬಂದಾಗ, ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದ್ದಾರೆ. ಆದರೂ ಆತ ಹಣ ಹಂಚಲು ಮುಂದಾದಾಗ ಗ್ರಾಮಸ್ಥರು ಚಪ್ಪಲಿಯಿಂದ ಹೊಡೆದಿದ್ದಾರೆ.

ಗ್ರಾಮಸ್ಥರು ಚುನಾವಣಾ ವೀಕ್ಷಕರಿಗೆ, ಪ್ಲೈಯಿಂಗ್ ಸ್ಕ್ವಾಡ್ ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ, ಕೂಡಲೇ ಆ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.