ಹಣ ಸ್ವೀಕಾರ ಇಮ್ರಾನ್‌ಗೆ ನೋಟಿಸ್

ಇಸ್ಲಮಾಬಾದ್, ಆ. ೨- ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ೩೪ “ನಿಷೇಧಿತ ಸಂಸ್ಥೆಗಳಿಂದ ವಿದೇಶಿ ದೇಣಿಗೆ”
ಸ್ವೀಕಾರ ಮಾಡಿದ್ದಾರೆ ಎಂದು ಪಾಕಿಸ್ತಾನದ ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ಹೊಸ ಬಾಂಬ್ ಹಾಕಿದ್ದಾರೆ.
ಪಾಕಿಸ್ತಾನ ಆಕ್ರಮಿತ ಪಂಜಾಬ್ ಪ್ರಾಂತ್ತದಲ್ಲಿ ಗೆಲುವು ಸಾಧಿಸಿ ರಾಷ್ಟ್ರೀಯ ಸಂಸತ್ ಗೆ ಶೀಘ್ರ ಚುನಾವಣೆ ನಡೆಸಿ ಎನ್ನುವ ಬೇಡಿಕೆ ಮುಂದಿಟ್ಟಿದ್ದ ಇಮ್ರಾನ್ ಖಾನ್ ಅವರಿಗೆ ಅಲ್ಲಿನ ಸರ್ಕಾರ ಮುಟ್ಟಿ ನೋಡಿಕೊಳ್ಳುವಂತೆ ಬಿಸಿ ಮುಟ್ಟಿಸಿದೆ.
೩೪ “ನಿಷೇಧಿತ ವಿದೇಶಿ ಸಂಸ್ಥೆಗಳಿಂದ ದೇಣಿಗೆಗಳನ್ನು” ಸ್ವೀಕರಿಸಿದ್ದು ಈ ಕುರಿತು ವಿವರ ನೀಡುವಂತೆ ಶೋಕಾಸ್ ನೋಟೀಸ್ ನೀಡಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.
ಇದರ ಜೊತೆಗೆ ಪಿಟಿಐಗೆ ಸೇರಿದ ೧೩ ಕ್ಕೂ ಅಧಿಕ ಬೇನಾಮಿ ಮತ್ತು ವಿವರ ನೀಡದ ಖಾತೆಯನ್ನೂ ಪತ್ತೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.ಪಾಕಿಸ್ತಾನಿ ಉದ್ಯಮಿ ಆರಿಫ್ ನಖ್ವಿ ಒಡೆತನದ ಕೇಮನ್ ಐಲ್ಯಾಂಡ್ಸ್ ಕಂಪನಿಯಾ? ವೂಟನ್ ಕ್ರಿಕೆಟ್ ಲಿಮಿಟೆಡ್ ಮತ್ತು “ವೂಟನ್ ಟಿ೨೦ ಕಪ್” ನಂತಹ ಚಾರಿಟಿ ನಿಧಿಸಂಗ್ರಹಣೆಯಿಂದ ಬಂದ ಹಣವನ್ನು ಪಿಟಿಐ ಬ್ಯಾಂಕ್‌ರೋಲ್ ಮಾಡಲು ಬಳಸಲಾಗಿದೆ ಎಂದು ತಿಳಿಸಲಾಗಿದೆ.
ಮೂಲಗಳ ಪ್ರಕಾರ ೨೦೧೩ ರಲ್ಲಿ ಪಿಟಿಐ ಪಕ್ಷಕ್ಕೆ ಮೂರು ಕಂತುಗಳನ್ನು ವ, ಒಟ್ಟು ೨.೧೨ ದಶಲಕ್ಷ ಡಾಲರ್ ವರ್ಗಾವಣೆ ಮಾಡಲಾಗಿದೆ.ಯುಎಇ ನಿಂದ ಪಕ್ಷಕ್ಕೆ ಹೆಚ್ಚಿನ ಹಣ ಬಂದಿದೆ ಎಂದೂ ಕೂಡ ತಿಳಿಸಲಾಗಿದೆ.
“ಅಬುಧಾಬಿ ರಾಜಮನೆತನದ ಸದಸ್ಯರಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಮಂತ್ರಿಯಿಂದ ಕನಿಷ್ಠ ೨ ದಶಲಕ್ಷ ಡಾಲರ್ ಸೇರಿದಂತೆ ಕಂಪನಿಗಳು ಮತ್ತು ವ್ಯಕ್ತಿಗಳಿಂದ ವೂಟನ್ ಕ್ರಿಕೆಟ್‌ಗೆ ಹಣ ಸುರಿಯಲಾಗಿದೆ ಎಂದು ಮಾಹಿತಿ ನೀಡಲಾಗಿದೆ