ಹಣ ಸಿಗಬಹುದು ಆದರೆ ರಕ್ತ ಸಿಗಲ್ಲ, ಎಲ್ಲರು ರಕ್ತದಾನ ಮಾಡಿ ನವಾಜ ಖಾನ್ ಕರೆ

ಬೀದರ್ ಸೆ. 13:ಇಂದಿನ ಕಾಲದಲ್ಲಿ ಎಲ್ಲರಿಗೂ ಹಣ ಸಿಗಬಹುದು ಆದರೇ ಅನೇಕ ತುರ್ತು ಸಮಯದಲ್ಲಿ ರಕ್ತ ಸಿಗುವುದು ಕಷ್ಟಕರವಾಗಿದೆ ಹೀಗಾಗಿ ನವ ಯುವಕರು ರಕ್ತದಾನ ಮಾಡುವ ಮೂಲಕ ಅನೇಕರ ಜೀವ ಉಳಿಸಿ ಎಂದು ನಗರ ಸಭೆ ಸದಸ್ಯ ನವಾಜ್ ಖಾನ್ ಮನವಿ ಮಾಡಿದರು.

ಅವರು ನಗರದ ಹೈದ್ರಾಬಾದ್ ರಸ್ತೆಯಲ್ಲಿರುವ ನೂರ್ ಕಾಲೇಜಿನಲ್ಲಿ ಗೋಲ್ಡನ್ ಸುರಕ್ಷಾ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ದಾನಗಳಲ್ಲಿಯೇ ಶ್ರೇಷ್ಠದಾನ ರಕ್ತದಾನವಾಗಿದೆ. ಸಮಾಜದಲ್ಲಿ ಅನೇಕರಿಗೆ ಯಾವ ಸಮಯಕ್ಕೆ ರಕ್ತ ಬೇಕಾಗುತ್ತದೆ ಹೇಳಲು ಸಾಧ್ಯವಿಲ್ಲ ಹೀಗಾಗಿ ರಕ್ತದಾನ ಮಾಡಲು ಯುವಕರು ಮುಂದೆ ಬರಬೇಕೆಂದರು.

ಗೋಲ್ಡನ್ ಸುರಕ್ಷಾ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಸಂದೀಪ ಎಸ್ ಕುಮಾರ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ರಕ್ತ ಸಿಗಲಿ ಎಂಬ ಉದ್ದೇಶದಿಂದ ಮಾನವೀಯತೆ ಅಡಗಿದೆ ಒಬ್ಬರು ರಕ್ತ ನೀಡಿದ್ದರಿಂದ 3 ಜನರ ಜೀವ ಉಳಿಸಿದಂತಾಗುತ್ತದೆ ಎಂದರು. ಹೀಗಾಗಿ ನಮ್ಮ ಸಂಸ್ಥೆಯಿಂದ ಪ್ರಥಮ ಕಾರ್ಯಕ್ರಮವಾಗಿ ನಾನು ರಕ್ತದಾನ ಶಿಬಿರ ಹಮ್ಮಿಕೊಂಡಿದ್ದೇನೆ ಎಂದರು.

ಬ್ರಿಮ್ಸ್ ಆಸ್ಪತ್ರೆಯ ಡಾ. ಸತೀಶ ಮಾತನಾಡಿ, ಒಬ್ಬರು ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಬಹುದು ಇದರಿಂದ ಅನೇಕ ರೋಗಗಳು ಬರೋದಿಲ್ಲ ಹೀಗಾಗಿ ರಕ್ತದಾನವೇ ಶ್ರೇಷ್ಠವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಯುವ ಮುಖಂಡ -Éೀರೋಜ್‍ಖಾನ್, ಡಾ. ಸೈಯದ್ ಸಮೀ, ವಿಜಯಮೇರಿ ಮಹಿಳಾ ಸಂಸ್ಥೆ ಅಧ್ಯಕ್ಷ ಜೈರಾಜ ದೊಡ್ಡಮನಿ ಸೇರಿದಂತೆ ಇನ್ನಿತರರು ಇದ್ದರು.

ರಕ್ತದಾನ ಶಿಬಿರದ ಆರಂಭಕ್ಕೂ ಮುನ್ನ ಮೇಥೋಡಿಸ್ಟ ಚರ್ಚನ ಪಾಸ್ಟರ್‍ಗಳಾದ ರೇ. ಪುನೀತಕುಮಾರ, ರೇ. ಇಮಾನ್ಯುವೇಲ್ ಪ್ರದೀಪಕುಮಾರ ಅವರು ಪ್ರಾಥನೆ ಸಲ್ಲಿಸುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.