ಹಣ ಬಲದ ಚುನಾವಣೆಯಲ್ಲಿ ಜನ ಬಲ ಗೆಲ್ಲಲಿದೆ

ಮಸ್ಕಿ,ನ.೨೨- ಮಸ್ಕಿ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಹಣ ಬಲ ಕೆಲಸ ಮಾಡುವುದಿಲ್ಲ ಹಣ ಬಲದ ನಡುವೆ ಜನ ಬಲ ದಿಂದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರ ಗೆಲುವು ನಿಶ್ಚಿತ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ ವಿಶ್ವಾಸ ವ್ಯಕ್ತಪಡಿಸಿದರು. ಸಮಾವೇಶದ ಪೂರ್ವ ಭಾವಿ ಸಿದ್ದತೆ ಪರಿಶೀಲನೆ ಗೆಂದು ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.
ಉಪ ಚುನಾವಣೆ ಮಿನಿ ಕದನ ಮನಿ, ಮ್ಯಾನ್ ಪವರ್ ನಡುವೆ ನಡೆಯಲಿದೆ ಉಪ ಚುನಾವಣೆಯಲ್ಲಿ ಮನಿ ಪವರ್ ನಡೆಯುವುದಿಲ್ಲ ಮ್ಯಾನ್ ಪವರ್ ಮ್ಯಾಜಿಕ್ ಮಾಡಲಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಬಸನಗೌಡ ತುರ್ವಿಹಾಳ ಪರ ಅನುಕಂಪದ ಅಲೆ ಎದ್ದಿದೆ ಮತದಾರರ ಅನುಕಂಪ ಕೈ ಕಾರ್ಯಕರ್ತರ ಪರಿಶ್ರಮ ದಿಂದ ಬಸನಗೌಡ ತುರ್ವಿಹಾಳ ಗೆಲುವಿನ ದಡ ಸೇರಲಿದ್ದಾರೆ. ೨೩ ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವುಕುಮಾರ್, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.
ಈ ವೇಳೆ ಬಸನಗೌಡ ತುರ್ವಿಹಾಳ ಸೇರಿದಂತೆ ಅನೇಕ ಪ್ರಮುಖ ಮುಖಂಡರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ಬಯ್ಯಾಪೂರ ಹೇಳಿದರು. ಪ್ರತಿ ಹಳ್ಳಿಯ ಜನ ಸ್ವಯಂ ಪ್ರರೀತರಾಗಿ ಬಸನಗೌಡ ತುರ್ವಿಹಾಳ ಅವರನ್ನು ಗೆಲ್ಲಿಸಲು ಟೊಂಕ ಕಟ್ಟಿ ನಿಂತಿದ್ದಾರೆ ತಮ್ಮ ಸ್ವಂತ ದುಡ್ಡಿನಲ್ಲಿ ಸಮಾವೇಶಕ್ಕೆ ಬರಲು ಸಜ್ಜಾಗಿದ್ದಾರೆ ನಾನು ಎದುರಿಸಿದ ಚುನಾವಣೆಗಳಲ್ಲಿ ಜನರು ಇಷ್ಟು ಉತ್ಸಾಹ ತೋರಿದ್ದಿಲ್ಲ.
ಬಸನಗೌಡ ತುರ್ವಿಹಾಳ ಅವರ ಜನ ಬೆಂಬಲ ಕಂಡು ನಾನು ಬೆರಗಾಗಿದ್ದೆನೆ ಉಪ ಚುನಾವಣೆಯಲ್ಲಿ ಬಸನಗೌಡ ತುರ್ವಿಹಾಳ ಅವರ ಗೆಲುವು ಗ್ಯಾರಂಟಿ ಎಂದು ಅಮರೇಗೌಡ ಬಯ್ಯಾಪೂರ ಹೇಳಿದರು. ತಾಪಂ.ಸದಸ್ಯ ಶಿವಣ್ಣ ನಾಯಕ, ತಾಪಂ. ಸದಸ್ಯ ಬಸ್ಸಪ್ಪ,ಮುಖಂಡರಾದ ಆದನಗೌಡ ಸಂತೆ ಕೆಲ್ಲೂರ,ಎಚ್ ಬಿ. ಮುರಾರಿ, ಬಸನಗೌಡ ಮುದಬಾಳ, ಶರಣಪ್ಪ ಎಲಿಗಾರ ಇನ್ನಿತರ ಮುಖಂಡರಿದ್ದರು.