ಹಣ ಗಳಿಕೆಗಿಂತ ಜ್ಞಾನ ಸಂಪಾದನೆ ಮುಖ್ಯ

ಯಾದಗಿರಿ,ಏ.9-ಹಣ ಸಂಪಾದನೆಗಿಂತ ಜ್ಞಾನ ಸಂಪಾದನೆ ಮುಖ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಸಿದ್ದರಾಜ ರೆಡ್ಡಿ ಹೇಳಿದರು.
ನಗರದ ಎಸ್.ಡಿ.ಶಿಕ್ಷಣ ಸಂಸ್ಥೆಯಲ್ಲಿ ಗಿರಿ ಸಿರಿ ಸಾಂಸ್ಕøತಿಕ ವೇದಿಕೆಯನ್ನು ಸಸಿಗ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹಣ ಗಳಿಕೆ ಮುಖ್ಯವಲ್ಲ ಕಲೆ, ಸಾಹಿತ್ಯದಿಂದ ಜೀವನ ಸಾರ್ಥಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಗಿರಿ ಸಿರಿ ಸಾಂಸೃತಿಕ ವೇದಿಕೆ ಅಧ್ಯಕ್ಷರಾದ ಮರಲಿಂಗ ಜಿ ಪೂಜಾರಿ ಅವರು ಸ್ಥಳಿಯ ಕವಿಕಲಾವಿದರನ್ನು ಪ್ರೋತ್ಸಹಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯಮಡಲಿದೆ ಎಂದರು. ಉಪಾಧ್ಯಕ್ಷರಾದ ದುರ್ಗಪ್ಪ ಹೆಚ್. ಪೂಜಾರಿ ಮಾತನಾಡಿದರು. ಕನ್ನಡ ಉಪನ್ಯಾಸಕರಾದ ಗುರು ಪ್ರಸಾದ್ ವೈದ್ಯಾ ಉಪಸ್ಥಿತರಿದ್ದರು. ಗೌರವ ಅಧ್ಯಕ್ಷರಾದ ಸಾದಶಿವಪ್ಪ ಗೋಧಿಮನಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಿಮ್ಮಣ ಶಿರುಗೋಳ್, ಮಲ್ಲಿಕಾರ್ಜುನ ಕೊಂಕಲ್, ರಾಜು ಪೂಜಾರಿ, ಶಿವರಾಜ್‍ಪೂಜಾರಿ, ಹಣಮಂತ ಶಿರುಗೋಳ, ಗೌರಮ್ಮ ಮಾಳಿಕೇರಿ, ಗೌರಮ್ಮ ಮುಂಡ್ರಿಕೇರಿ, ಶಾಂತಮ್ಮ ಮ್ಯಾಗೇರಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಗೀತಾ ಮಾಮಾನಿ ನಿರೂಪಿಸಿ ವಂದಿಸಿದರು.