ಹಣ ಕಿತ್ತುಕೊಂಡು ಪರಾರಿಯಾದ ಖದೀಮರು

ತಾಳಿಕೋಟೆ:ಆ.10: ಪೇಟ್ರೋಲ್‍ಪಂಪಿನಲ್ಲಿ ಜಮೆಯಾದ ಹಣ ಬ್ಯಾಂಕಿಗೆ ಕಟ್ಟಲು ಹೊರಟಿದ್ದ ವ್ಯಕ್ತಿಯ ಮೈಮೇಲೆ ಬೈಕ್ ಹಾಯಿಸುವಂತೆ ಮಾಡಿ ಹಣವನ್ನು ಕಿತ್ತುಕೊಂಡು ಹೋಗಿರುವ ಘಟನೆ ಪಟ್ಟಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್‍ನಲ್ಲಿ ದಿ.4-8-2023 ರಾತ್ರಿ 10 ರಿಂದ ದಿ. 5-8-2013 ರ ಮಧ್ಯಾಹ್ನ 12 ಗಂಟೆಯವರೆಗೆ ಜಮೆಯಾಗಿದ್ದ 1,31,300 ರೂ.ಹಣವನ್ನು ಬಂಕಿನ ವ್ಯವಸ್ಥಾಪಕ ಮಹ್ಮದರಫೀಕ್ ಖಾದರಸಾ ಲಾಹೋರಿ ಎಂಬವರು ದಿ. 5 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ಕರ್ನಾಟಕ ಬ್ಯಾಂಕಿಗೆ ಹಣ ಜಮೆ ಮಾಡಲು ಟಿವ್ಹಿಎಸ್ ಎಕ್ಸಲ್ ಮೋಟರ್ ಸೈಕಲ್ ಮೇಲೆ ಹೋರಟಿದ್ದಾಗ ಶ್ರೀ ಖಾಸ್ಗತೇಶ್ವರ ಪೇಟ್ರೋಲ್ ಬಂಕ್ ಹತ್ತಿರ ಹಿರೋ ಹೊಂಡಾ ಮೋಟರ್ ಸೈಕಲ್ ಮೇಲೆ ಬಂದ ಇಬ್ಬರು ಖದಿಮರು ಮಹ್ಮದರಫಿಕ್ ಲಾಹೋರಿಯ ಬೈಕ್ ಮೇಲೆ ಬಂದಂತೆ ಮಾಡಿ ಬೈಕ್ ನಿಲ್ಲಿಸಿದ ಖದಿಮರು ಒಬ್ಬರು ವಾಗ್ವಾದ ಮಾಡುತ್ತಿದ್ದರೆ ಇನ್ನೋಬ್ಬರು ಬೈಕಿನ ಟ್ಯಾಂಕ್ ಕವರ್‍ನಲ್ಲಿಟ್ಟದ ಹಣವನ್ನು ಕಿತ್ತುಕೊಂಡು ಇಬ್ಬರು ಸೇರಿ ವಿಜಯಪುರ ರಸ್ತೆಯ ಕಡೆಗೆ ಪರಾರಿಯಾಗಿದ್ದಾರೆಂದು ಪಟ್ಟಣದ ಪೊಲೀಸ್ ಠಾಣೆಗೆ ಬಂಕಿನ ವ್ಯವಸ್ಥಾಪಕ ಮಹ್ಮದರಫೀಕ್ ಲಾಹೋರಿ ದೂರು ನೀಡಿದ್ದಾರೆ.
ಹಣ ದೊಚಿಕೊಂಡು ಹೋದ ಇಬ್ಬರು ವ್ಯಕ್ತಿಗಳು ಸುಮಾರು 35ವರ್ಷನವರು ಇರಬಹುದು ಒಬ್ಬನು ಚಾಕಲೇಟ್ ಬಣ್ಣದ ಚೌಕಡಿ ಟಿ ಶರ್ಟ, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದ ಇನ್ನೊಬ್ಬನು ನೀಲಿ ಟೀಶರ್ಟ್ ಜೀನ್ಸ್ ಪ್ಯಾಂಟ್ ಧರಿಸಿದ್ದರೆಂದು ಪೊಲೀಸ್‍ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಧಿಕಾರಿಗಳ ಬೆಟ್ಟಿ
ಹಣ ದೋಚಿಕೊಂಡು ಹೋದ ಪ್ರಕರ್ಣಕ್ಕೆ ಸಂಬಂದಿಸಿ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‍ಆಯ್ ರಾಮನಗೌಡ ಸಂಕನಾಳ, ಅಪರಾಧ ವಿಭಾಗದ ಪಿಎಸ್‍ಐ ಆರ್.ಎಸ್.ಬಂಗಿ ಅವರು ಘಟನಾ ಸ್ಥಳಕ್ಕೆ ಬೆಟ್ಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.