ಹಣ, ಆಸ್ತಿ ಗಳಿಕೆಗಿಂತ ಪರಿಸರ ಮನುಕುಲದ ಸಂಪತ್ತು

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.೧೦: ಹಣ, ಆಸ್ತಿ ಗಳಿಕೆಗಿಂತಲೂ ಉತ್ತಮ ಪರಿಸರ ಮನುಕುಲದ ಸಂಪತ್ತು. ಆದ್ದರಿಂದ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಗಿಡ, ಮರಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಕಿವಿಮಾತು ಹೇಳಿದರು.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ತಾಲೂಕಿನ ಕೊಗ್ಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜೀವಿಸಲು ಬೇಕಾದ ಗಾಳಿ, ನೀರು ಮತ್ತು ಆಹಾರ ಪರಿಸರದ ಕೊಡುಗೆಯಾಗಿವೆ ಎಂದರು.ಗಿಡ, ಮರಗಳು ಇಂಗಾಲದ ಡೈ ಆಕ್ಸೆöÊಡ್ ಹೀರಿಕೊಂಡು ನಮಗೆ ಆಮ್ಲಜನಕ ನೀಡುತ್ತವೆ. ಮರಗಳಲ್ಲಿ ಪರಿಸರ ಸಮತೋಲನಕ್ಕೆ ಸಹಕಾರಿಯಾಗುವ ಸೂಕ್ಷಾö್ಮಣು ಜೀವಿಗಳು ಇರುತ್ತವೆ. ಕಾಲಕಾಲಕ್ಕೆ ಮಳೆಯಾಗಿ ಬೆಳೆ ಬೆಳೆಯಲು ಮರಗಳು ಅವಶ್ಯವಾಗಿವೆ. ಆದ್ದರಿಂದ ಅರಣ್ಯ ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ  ಚಂದ್ರಮ್ಮ, ಒಬಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಗ್ಗನೂರು ಮಂಜಣ್ಣ, ಕಾಂಗ್ರೆಸ್ ಮುಖಂಡರಾದ ಕುಬೇರಪ್ಪ, ಮರಡಿ ಚಂದ್ರಪ್ಪ, ಕೆಂಚಪ್ಪ, ಪರಸಪ್ಪ, ಮಂಜುನಾಥ್, ಸಿದ್ದೇಶ್, Ä ಹನುಮಂತಣ್ಣ, ಅಣ್ಣಪ್ಪ, ರುದ್ರಪ್ಪ, ಶಿಡ್ಲಪ್ಪ, ಎ.ಕೆ.ಚಂದ್ರಪ್ಪ,  ಬೋವಿ ರಾಮಣ್ಣ, ಡಿ.ಮಂಜಪ್ಪ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.