ಹಣ್ಣಿನ ಸಲಾಡ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = ೨೪೦ ಎಂಎಲ್ )
೨ ಟೇಬಲ್ ಚಮಚ ಕಸ್ಟರ್ಡ್ ಪೌಡರ್
೨ ಟೇಬಲ್ ಚಮಚ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಂತೆ)
೨.೨೫ ಕಪ್ ಹಾಲು
೧ ಕಪ್ ಹಣ್ಣು (ಸೇಬು, ಬಾಳೆಹಣ್ಣು, ದ್ರಾಕ್ಷಿ, ದಾಳಿಂಬೆ,
ಮಾವು, ಕಲ್ಲಂಗಡಿ ಇತ್ಯಾದಿ)
ಹಣ್ಣಿನ ಸಲಾಡ್ ಮಾಡುವ ವಿಧಾನ
ಒಂದು ಬಟ್ಟಲಿನಲ್ಲಿ ಎರಡು ಟೇಬಲ್ ಚಮಚ ಕಸ್ಟರ್ಡ್ ಪೌಡರ್ ತೆಗೆದುಕೊಳ್ಳಿ. ಅದಕ್ಕೆ ಕಾಲು ಕಪ್ ಹಾಲು ಹಾಕಿ ಗಂಟಿಲ್ಲದಂತೆ ಕಲಸಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಎರಡು ಕಪ್ ಹಾಲು ತೆಗೆದುಕೊಳ್ಳಿ. ಅದಕ್ಕೆ ಎರಡು ಟೇಬಲ್ ಚಮಚ ಸಕ್ಕರೆ ಹಾಕಿ ಕುದಿಯಲು ಇಡಿ. ಹಾಲು ಸ್ವಲ್ಪ ಬಿಸಿ ಆದ ಮೇಲೆ ಕಲಸಿಟ್ಟುಕೊಂಡ ಹಾಲು ಮತ್ತು ಕಸ್ಟರ್ಡ್ ಪೌಡರ್‌ನ್ನು
ಸ್ವಲ್ಪ ಸ್ವಲ್ಪವಾಗಿ ಸೇರಿಸುತ್ತ, ಗಂಟಿಲ್ಲದಂತೆ ಕಲಸಿಕೊಳ್ಳಿ. ಕುದಿಸಿದ ನಂತರ, ಉರಿ ಕಡಿಮೆ ಮಾಡಿ, ಒಂದೈದು ನಿಮಿಷ ಕುದಿಸುವುದನ್ನು ಮುಂದುವರೆಸಿ. ಸ್ವಲ್ಪ ದಪ್ಪ ಆದ ಮೇಲೆ ಸ್ಟವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಫ್ರಿಡ್ಜ್‌ನಲ್ಲಿಡಿ. ತಣ್ಣಗಾದ ಮೇಲೆ, ಕತ್ತರಿಸಿದ ಹಣ್ಣುಗಳನ್ನು ಹಾಕಿ. ಹುಳಿ ಇರುವ ಹಣ್ಣುಗಳನ್ನು ಹಾಕುವುದು ಬೇಡ. ಬಡಿಸುವ ಮೊದಲು ಮೇಲಿನಿಂದ ಹಣ್ಣುಗಳಿಂದ ಅಲಂಕರಿಸಿ ಸವಿದು ಆನಂದಿಸಿ.