ಹಣ್ಣಿನ ವ್ಯಾಪಾರಕ್ಕೆ ಅನುಮತಿ ನೀಡಲು ಒತ್ತಾಯ

ರಾಯಚೂರು.ಏ.೨೪-ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಂಮರು ಉಪವಾಸ ಇರುವ ಕಾರಣ ನಗರದಲ್ಲಿ ಸಂಜೆ ಹಣ್ಣಿನ ವ್ಯಾಪಾರಕ್ಕೆ ಅನುಮತಿ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸಾಜೀದ್ ಸಮೀರ ನೇತೃತ್ವದಲ್ಲಿ ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಜ್ಯದಲಿ ಕೊರೋನಾ ೨ ನೇ ಅಲೆ ಹೆಚ್ಚಾಗಿದ್ದು ಸರ್ಕಾರದ ಮಾರ್ಗ ಸೂಚಿ ಅನ್ವಯ ಮಾರುಕಟ್ಟೆ ಪ್ರದೇಶದ ಅಂಗಡಿ ಮುಂಗಟ್ಟು ಬಂದ್ ಮಾಡಲಾಗುತ್ತಿದೆ. ಆದರೆ ರಂಜಾನ್ ತಿಂಗಳ ಇರುವುದರಿಂದ ಮುಸ್ಲಿಂಮರು ೧ ತಿಂಗಳ ಕಾಲ ಉಪವಾಸ ಇರುತ್ತಾರೆ.ಇದರ ಹಿನ್ನೆಲೆ ಸಂಜೆ ಇಫ್ತಿಯಾರ್ ಉಪವಾಸ ಬಿಡುವ ವೇಳೆ ಹಣ್ಣು ಹಂಪಲ ಸೇವನೆ ಮಾಡುತ್ತಾರೆ. ಆದರೆ ಹಣ್ಣಿನ ಅಂಗಡಿ ಮುಂಗ್ಗಟ್ಟು ಬಂದ್ ಮಾಡಿರುವುದರಿಂದ ಸಮಸ್ಯೆ ಯಾಗಿದೆ. ಆದ್ದರಿಂದ ಸಂಜೆ ೫ ರಿಂದ ೭ ಗಂಟೆಯವರೆಗೆ ಹಣ್ಣಿನ ವ್ಯಾಪಾರ ಮಾಡಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದಂರ್ಭದಲ್ಲಿ ನಗರ ಸಭೆ ಸದಸ್ಯ ಜಿಂದಪ್ಪ, ಸುನೀಲ ಕುಮಾರ ಮುಖಂಡರಾದ ನರಸಿಂಹಲು ಮಾಡಗಿರಿ, ಬೂದೆಪ್ಪ, ಫರೀದ್ ಮೌಲಾಲ, ಹಾಜೀಬಾಬು ಸೇರಿದಂತೆ ಇತರರು ಇದ್ದರು.