ಹಣ್ಣಿನ ಬೇಳೆಗಳಿಂದ ಪರಿಸರ ಆರೋಗ್ಯ ಸಮೃದ್ದಿ:ದರ್ಶನಾಪುರ

ಶಹಾಪುರ:ಜೂ.5:ಪ್ರತಿಯೊಂದು ಜೀವಿಗೂ ಗಾಳಿ ನೀರು ಬೇಳಕು ಅವಶ್ಯಕವಾಗಿ ಬೇಕಾಗಿದೆ. ಈ ಮೂರು ಪ್ರಕೃತಿಗಳ ಕೊಡುಗೆಯಾಗಿದ್ದು, ಇವುಗಳನ್ನು ಸಂರಕ್ಷಣೆ ಮಾಡುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಣ್ಣಿನ ಗಿಡಗಳ ಬೇಳವಣಿಗೆಗಳಿಂದ ಮಾನವನಿಗೆ ಆಕ್ಷಿಜನ ವೃದ್ದಿಯಾಗುವದಲ್ಲದೆ. ಆರೋಗ್ಯಕರ ಬೇಳವಣಿಗೆಗೆ ಹಣ್ಣುಗಳ ಸಹಕಾರಿಯಾಗಿವೆ. ಹಲವಾರು ಬಗೆಯ ಹಣ್ಣು ಹಂಪಲುಗಳನ್ನು ಬೇಳೆಯುವದರಿಂದ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗುತ್ತಿದಲ್ಲದೆ ನಮ್ಮಗಳ ಆರೋಗ್ಯ ಉತ್ತಮವಾಗಿರಲು ಸಾಧ್ಯವಾಗುತ್ತದೆ. ಎಂದು ಶಾಸಕ ದರ್ಶನಾಪುರ ತಿಳಿಸಿದರು. ಅವರು ತಾಲುಕಿನ ಕೊಡಮನಳ್ಳಿಯ ಪ್ರಗತಿಪರ ರೈತ ನಿವೃತ್ತ ರೆಶ್ಮೆ ಇಲಾಖೆ ನೌಕರರಾಗಿದ್ದ, ಶ್ರೀನಿವಾಸಚಾರ್ಯ ಸಗರ. ಮತ್ತು ಕೋನೇರಾಚಾರ್ಯ ಸಗರವರು ತಮ್ಮ 6 ಏಕರೆ ಜಮೀನಿನಲ್ಲಿ ಬೇಳೆದ ನಿಂಬೆಗಿಡ. ಪೇರೆಳೆ ಹಣ್ಣು [ ಜಂಪಲದ ಹಣ್ಣು] 2000 ಗೀಡ, ಶೀತಾಫಲ 3000 ಗೀಡಗಳನ್ನು ಮತ್ತು ದಾಳಂಬರಿ ಗೀಡಗಳ ನಟ್ಟು ಉತ್ತಮ ಫಸಲು ಹಿನ್ನಲೆಯಲ್ಲಿ , ಅವರ ಹೊಲಕ್ಕೂ ಬೇಟಿ ನೀಡಿದ ದರ್ಶನಾಪುರವರು. ಪ್ರತಿಯೊಬ್ಬರು ತಮ್ಮ ಹೊಲಗಳಲ್ಲಿ ಹಣ್ಣು ಹಂಪಲಿನ ಗೀಡಗಳನ್ನು ಬೇಳಸಿಕೊಳ್ಳಬೇಕು, ಅಥವಾ ಹಣ್ಣು ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ಈ ಭಾಗದ ರೈತರು ಆರ್ಥಿಕವಾಗಿ, ಹಾಗೂ ದೈಹಿಕವಾಗಿ, ಹಾಗೂ ಆರೋಗ್ಯಕವಾಗಿ ಸದೃಡರಾಗಲು ಸಹಕಾರಿಯಾಗುತ್ತದೆ. ಎಂದು ದರ್ಶನಾಪುರವರು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂಧರ್ಭದಲ್ಲಿ ರೈತ ಕುಟುಂಬಸ್ಥರು ಸಿಂಗನಳ್ಳಿ ಗ್ರಾಮದ ಮುಖಂಡರಾದ ರವರು ಹಾಜರಿದ್ದರು.