ಹಣಮನಹಳ್ಳಿಯವರಿಗೆ ವಿಶ್ವ ಸಾಹಿತ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ

ಸೇಡಂ, ಸ,23: ಹುಬ್ಬಳ್ಳಿಯ ವಿಶ್ವ ದರ್ಶನ ದಿನಪತ್ರಿಕೆ ಹಾಗೂ ಕರ್ನಾಟಕ ಪ್ರಜಾ ದರ್ಶನ ಮಾಸ ಪತ್ರಿಕೆ ರವರು ಕೊಡುಮಾಡುವ. ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಯಲ್ಲಿ “(ಸಾಹಿತ್ಯ ಕ್ಷೇತ್ರ)ಶಿಕ್ಷಕ-ಕವಿ ಶ್ರೀ ಮುರಗೆಪ್ಪ ತಂದೆ ರೇವಣಸಿದ್ದಪ್ಪ ಹಡಪದ ಹಣಮನಹಳ್ಳಿ. (ಸಹ ಶಿಕ್ಷಕರು) ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಟಿ.ಬಿ.ಹಳ್ಳಿ.ತಾ:ಸೇಡಂ ರವರಿಗೆ 22/09/2022ರಂದು ರಂಗಾಯಣ ಸಭಾಭವನ ಧಾರವಾಡದಲ್ಲಿ ,ವಿಶ್ವ ದರ್ಶನ ದಿನ ಪತ್ರಿಕೆ ಪ್ರಥಮ ಸಮ್ಮೇಳನದಲ್ಲಿ ಕರ್ನಾಟಕ ಪ್ರಜಾ ದರ್ಶನ ಮಾಸ ಪತ್ರಿಕೆಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳ ಪ್ರಧಾನ ಸಮಾರಂಭದಲ್ಲಿ “ವಿಶ್ವ ಸಾಹಿತ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ” ನೀಡಿ ಸನ್ಮಾನಿಸಲಾಯಿತು.
ವಿಶ್ವ ದರ್ಶನ ದಿನ ಪತ್ರಿಕೆ ಹಾಗೂ ಕರ್ನಾಟಕ ಪ್ರಜಾ ದರ್ಶನ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ಡಾ:ಎಸ್. ಎಸ್. ಪಾಟೀಲ,ಸಮ್ಮೇಳನ ಉದ್ಘಾಟನೆಯನ್ನು ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಅರಳಿ ನಾಗರಾಜ(ವಿಶ್ರಾಂತ ನ್ಯಾಯಾಧೀಶರು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು) ಮಾಡಿದರು ಸಮ್ಮೇಳನ ಅಧ್ಯಕ್ಷರಾಗಿ ಶ್ರೀ ಮಾನ್ಯಎಲ್.ಎಸ್.ಶಾಸ್ತ್ರಿಗಳು(ಹಿರಿಯ ಪತ್ರಕರ್ತರು ಬೆಳೆಗಾವಿರವರು ಉಪಸ್ಥಿತರಿದ್ದರು.