ಹಣಮಂತಪ್ಪ ಪಾಟೀಲರ ಸೇವೆ ಅನುಪಮ: ಸುರೇಶ ಚನಶೆಟ್ಟಿ

ಬೀದರ:ಜೂ.1: ಶಿಕ್ಷಕರಾಗಿ. ಪತ್ರಕರ್ತರಾಗಿ, ಕನ್ನಡ ಹೋರಾಟಗಾರರಾಗಿ ಅವರು ಸಲ್ಲಿಸಿದ ಸೇವೆ ಅನುಪಮವಾದದ್ದು.ಅವರ ಬದುಕಿನ ವಿವಿಧ ಆಯಾಮಗಳನ್ನು ಕುರಿತು ಸಮಗ್ರ ಮಾಹಿತಿಯೊಂದಿಗೆ ಸಂಸ್ಮರಣ ಗ್ರಂಥವನ್ನು ಹೊರತರಲು ಯೋಜಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷರಾದ ಸುರೇಶ್ ಚನ್ನಶಟ್ಟಿ ನುಡಿದರು.
ಅವರು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಕನ್ನಡ ಹೋರಾಟಗಾರ ಹಣಮಂತಪ್ಪ ಪಾಟೀಲರ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಹಣಮಂತಪ್ಪ ಪಾಟೀಲರು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರಾಗಿದ್ದು ಅನೇಕ ಕನ್ನಡಪರ ವಿಷಯಗಳಿಗೆ ಮೊದಲಿಗರಾದವರು.ಬೀದರ ಜಿಲ್ಲೆಯಲ್ಲಿ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೊದಲಬಾರಿಗೆ ಬೀದರನಲ್ಲಿ ಜರುಗಿದಾಗ ಅದಕ್ಕೆ ಸಾಕ್ಷಿಯಾಗಿದ್ದ ಪಾಟೀಲರು ಕನ್ನಡ ಸಾಕ್ಷಿ ಪ್ರಜ್ಞೆಯಂತಿದ್ದರು. 1972 ರಲ್ಲಿ ಬೀದರ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪೆÇ್ರ. ಜಿ. ವೆಂಕಟಸುಬ್ಬಯ್ಯ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿ ಅಂದಿನ ಕೇಂದ್ರ ಕಸಾಪ ಅಧ್ಯಕ್ಷರಾಗಿದ್ದ ಜಿ.ನಾರಾಯಣ ಅವರನ್ನು ಕರೆಸಿ ಎತ್ತಿನ ನೂರು ಬಂಡಿಗಳಲ್ಲಿ ಮೆರವಣಿಗೆ ಮಾಡಿಸಿದ್ದು ಅವಿಸ್ಮರಣೀಯ ಅಂಥ ಹಣಮಂತಪ್ಪ ಪಾಟೀಲರನ್ನು ಬೀದರ ಜಿಲ್ಲಾ ಹದಿನೈದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿದ್ದು,ಕನ್ನಡ ಕಟ್ಟಿದವರು ಮಾಲಿಕೆಯಲ್ಲಿ “ಕನ್ನಡ ಹೋರಾಟಗಾರ ಹಣಮಂತಪ್ಪ ಪಾಟೀಲ” ಎಂಬ ಪುಸ್ತಕ ಹೊರ ತಂದಿರುವ ಸಂತೃಪ್ತಿ ನಮಗಿದೆ.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಬಾಬುರಾವ ವಡ್ಡೆ ಅವರು ಮಾತನಾಡುತ್ತ ಗಡಿ ಭಾಗವಾದ ಬೀದರ ಜಿಲ್ಲೆಯಲ್ಲಿ ಮರಾಠಿ, ಉರ್ದು, ತೆಲುಗು ಮೊದಲಾದ ಭಾಷಾ ಪ್ರಾಬಲ್ಯಗಳ ಮಧ್ಯ ಕನ್ನಡವನ್ನು ಉಳಿಸಿ ಬೆಳೆಸಿದ ಕೀರ್ತಿ ಹಣಮಂತಪ್ಪ ಪಾಟೀಲ ಅವರಿಗೆ ಸಲ್ಲುತ್ತದೆ. ಪರಿಷತ್ತು ಮತ್ತು ಕನ್ನಡ ಹೋರಾಟಗಳಿಗೆ ಹಣಮಂತಪ್ಪ ಪಾಟೀಲರು ಬೇರು, ನಾವೆಲ್ಲ ಹೂವುಗಳು ಇದ್ದಂತೆ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕು ಕಸಾಪ ಅಧ್ಯಕ್ಷರಾದ ಎಂ.ಎಸ್. ಮನೋಹರ ಅವರು ಮಾತನಾಡುತ್ತಾ ಹಣಮಂತಪ್ಪ ಪಾಟೀಲರು ದೊಡ್ಡ ವಿಚಾರವಾದಿಗಳಾಗಿದ್ದರು ಭೌತಿಕವಾಗಿ ಅವರು ನಮ್ಮಿಂದ ಅಗಲಿದರೂ ಅವರ ಕನ್ನಡಪರ ಕಾಳಜಿಯ ವಿಚಾರಗಳು ಜೀವಂತವಾಗಿವೆ ಎಂದು ನುಡಿದರು.
ಕಸಾಪದ ಪದಾಧಿಕಾರಿಗಳಾದ ದೇವೇಂದ್ರ ಕರಂಜೆಯವರು ಮಾತನಾಡುತ್ತಾ ಪಾಟೀಲರದ್ದು ಅಪರೂಪದ ವ್ಯಕ್ತಿತ್ವ ಅವರಂಥ ಸರಳ ವ್ಯಕ್ತಿ ಮತ್ತೊಬ್ಬರು ಸಿಗುವುದು ಅಪರೂಪ ಎಂದು ನುಡಿದರು.
ಜಿಲ್ಲಾ ಕಸಾಪ ಕೋಶಾಧ್ಯಕ್ಷ ಟಿ.ಎಂ. ಮಚ್ಚೆ, ಗಡಿ ಪ್ರತಿನಿಧಿ ಶಿವಕುಮಾರ ಕಟ್ಟೆ, ಮಹಿಳಾ ಪ್ರತಿನಿಧಿ ಕಸ್ತೂರಿ ಪಟಪಳ್ಳಿ, ಸಾಹಿತಿ ರಮೇಶ ಬಿರಾದಾರ, ಡಾ. ಬಂಡಯ್ಯ ಸ್ವಾಮಿ, ಡಾ, ರಾಜಕುಮಾರ ಅಲ್ಲೂರೆ, ಹಾಗೂ ಕಸಾಪ ಪದಾಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು. ಡಾ. ಬಸವರಾಜ ಬಲ್ಲೂರ ಪ್ರಾಸ್ತಾವಿಕ ನುಡಿ ನುಡಿದರೆ ಜಗನ್ನಾಥ ಕಮಲಾಪುರೆ ನಿರೂಪಿಸಿದರು. ಶಿವಪುತ್ರ ಪಟಪಳ್ಳಿ ವಂದಿಸಿದರು.