ಹಣದ ಜೊತೆ ಆರೋಗ್ಯವೂ ಬೇಕು: ಸೂರ್ಯನಾರಾಯಣ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.08: ನಗರದ ಶಾಸಕ ಭರತ್ ರೆಡ್ಡಿ ಅವರು ತಮ್ಮ ಟಚ್ ಫರ್ ಲೈಫ್ ಪೌಂಡೇಶನ್ ನಿಂದ ಪ್ರತಿ ತಿಂಗಳು ರಕ್ತದಾನ ಶಿಬಿರ ಮಾಡುತ್ತಾರೆ. ನೀವು ಸಹ  ರಕ್ತದಾನ ಮಾಡಿ ಎಂದು ಮಾಜಿ ಶಾಸಕ ಸೂರ್ಯ ನಾರಾಯಣರೆಡ್ಡಿ  ಅವರು ಆರ್ಯ ವೈಶ್ಯ ಅಸೋಸಿಯೇಷನ್ ಗೆ ಮನವಿ ಮಾಡಿದರು. 
ಅವರು ಇಂದು ನಗರದ ಗಾಂಧಿಭವನದಲ್ಲಿ ಪ್ರಥಮ ಬಾರಿಗೆ ಇಲ್ಲಿನ ಆರ್ಯ ವೈಶ್ಯ  ಅಸೋಸಿಯೇಷನ್ ನಿಂದ  ಹಮ್ಮಿಕೊಂಡಿರುವ ಎಸ್.ಆರ್.ಎಂ.ಬಾಕ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದು ರಕ್ತದಕೊರತೆ ಕಾಡುತ್ತಿದೆ. ಅದಕ್ಕಾಗಿ ಯುವ ಜನತೆ ಹೆಚ್ಚು ಹೆಚ್ಚಾಗಿ ರಕ್ತದಾನಕ್ಕೆ ಮುಂದಾಗಬೇಕೆಂದರು.
ಅಸೋಸಿಯೇಷನ್ ನ ಕಾರ್ಯಕ್ರಮಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ.
ನಿಮ್ಮ ಅಸೋಸಿಯೇಷನ್ ನ  ರಮೇಶ್ ಗೋಪಾಲ್ ಅವರು ಆರೋಗ್ಯ ಮತ್ತು ಹಣ ಹೊಂದಿದ್ದಾರೆ. ಆದರೆ ನನಗೆ ಹಣ ಇದೆ ಆರೋಗ್ಯದ ಸಮಸ್ಯೆ ಅದಕ್ಕಾಗಿ  ನೀವೆಲ್ಲ ನಿಮ್ಮ ವೃತ್ತಿಯಲ್ಲಿ ಹೆಚ್ಚಿನದಾಗಿ ತೊಡಗಿಸಿಕೊಂಡು ಆರೋಗ್ಯ ಮರೆಯಬೇಡಿ. ಆರೋಗ್ಯಕ್ಕೆ ಆಧ್ಯತೆ ನೀಡಿ ಈ ನಿಟ್ಟಿನಲ್ಲಿ ಇಂತಹ ಕ್ರೀಡೆಗಳು ಸಹಕಾರಿ ಎಂದರು.
ಅಸೋಸಿಯೇಷನ್  ಅಧ್ಯಕ್ಷ ಡಾ.ಡಿ.ಎಲ್. ರಮೇಶ್ ಗೋಪಾಲ್  ಸ್ವಾಗತಿಸಿ,  ಪ್ರಾಸ್ತಾವಿಕವಾಗಿ  ಮಾತನಾಡುತ್ತ. 
ಬಳ್ಳಾರಿಯಲ್ಲಿ ಈ ಮೊದಲು ಫುಟ್ಬಾಲ್ ಪಂದ್ಯಾವಳಿ ಚೆನ್ನಾಗಿ ನಡೆಯುತ್ತಿದ್ದವು. ಆಗ ಮರ್ಚೆಂಟ್ ಟೀಂ ಇತ್ತು. ಈಗ ಫುಟ್ಬಾಲ್ ಕಡಿಮೆ ಆಗಿದೆ. ಅದಕ್ಕಾಗಿ ಅಸೋಸಿಯೇಷನ್ ನಿಂದ ಮುಕ್ತ ಫುಟ್ಬಾಲ್ ಪಂದ್ಯಾವಳಿ ನಡೆಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ನೇತ್ರ ದಾನ ಪ್ರೋತ್ಸಾಹಿಸುವ ಹಿನ್ಬಲೆಯಲ್ಲಿ ವಾಕಥಾನ್ ಹಮ್ಮಿಕೊಂಡಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮತ್ತು ಜೀವನದ ಒತ್ತಡಗಳ ನಿವಾರಣೆಗೆ ಅತಿಥಿಗಳಿಂದ  ಚಿಂತನಾ ಉಪನ್ಯಾಸ ಹಮ್ಮಿಕೊಳ್ಳಲಿದೆ. ಅಷ್ಟೇ ಅಲ್ಲದೆ ಸಮುದಾಯದ ರಾಜಕೀಯವಾಗಿಯೂ ಸಬಲರಾಗಲು ಯುವ ಸಮೂಹ ಸಿದ್ದವಾಗಿದೆ. ನಮ್ಮ ಅಸೋಸಿಯೇಷನ್ ನಲ್ಲಿ ಎರೆಡು ಸಾವಿರ ಸದಸ್ಯರಿದ್ದಾರೆ. ಇದನ್ನು ಐದು ಸಾವಿರ ಸದಸ್ಯರನ್ನಾಗಿ ಮಾಡಲು ಉದ್ದೇಶಿಸಿದೆ. ಇಂತಹ ಎಲ್ಲಾ ಕಾರ್ಯಗಳಿಗೆ ಮಾಜಿ ಶಾಸಕರಾಗಿರುವ ನಾರಾ ಸೂರ್ಯ ನಾರಾಯಣರೆಡ್ಡಿ ಅವರ ಸಹಕಾರ ಇದ್ದೇ ಇರುತ್ತೆ ಎಂದರು.
 ಬುಡಾ ಮಾಜಿ ಅಧ್ಯಕ್ಷ
ಮಾರುತಿ ಎಸ್, ಪ್ರಸಾದ್ ಮಾತನಾಡಿ, ಸಮುದಾಯ ನನ್ನನ್ನು ಬೆಳೆಸಿದೆ. ನಾನು ಸಮುದಾಯದ ಪ್ರತಿ ಬೆಳವಣಿಗೆಗೆ ಸಹಕಾರಿಯಾಗಿರುತ್ತೇನೆ. ಚಿಕ್ಕವನಿದ್ದಾಗಲೇ ನಾನು ಬುಡಾ ಕಚೇರಿಗೆ ನಮ್ಮ ತಂದೆ ಜೊತೆ ಹೋಗಿದ್ದೆ. ಆಗ ಸೂರ್ಯನಾರಾಯಣ ರೆಡ್ಡಿ ಅವರು ಅಧ್ಯಕ್ಷರಾಗಿದ್ದರು. ನಾನು ಈ ರೀತಿ ಆಗಬೇಕೆಂದು ಆಸೆಪಟ್ಟಿದ್ದೆ. ಅದು ಜೀವನದಲ್ಲಿ ಸಮುದಾಯದ ಸಹಕಾರದಿಂದ ಆಗಿದೆಂದರು. ಈಗ ಜೀವನದಲ್ಲಿ  ದುಡಿಮೆಗಿಂತ ಆರೋಗ್ಯ ಮುಖ್ಯವಾಗಿದೆ. ಆ ದಿಶೆಯಲ್ಲಿ ಕ್ರೀಡೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವ ಎಂದರು.
ಸಮಾರಂಭದಲ್ಲಿ ಉಪಾಧ್ಯಕ್ಷ ನಾಮ‌ನಾಗರಾಜ್ , ವಿಟ್ಟ ವೆಂಕಟೇಶ್, ರಾಮಕೃಷ್ಣ ವೇದಿಕೆಯಲ್ಲಿ ಇದ್ದರು. ಅಸೋಸಿಯೇಷನ್  ಕಾರ್ಯದರ್ಶಿ ಸೊಂತ ಗಿರಿಧರ್ ವಂದನಾರ್ಪಣೆ, ನವೀನ್ ಪ್ರಾರ್ಥನೆ ಮಾಡಿದರು.

:ತೆಲುಗಿನಲ್ಲಿ ಮಾತನಾಡಿ:
ಬಹುತೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಅತಿಥಿಗಳು ಕನ್ನಡ ಭಾಷೆಯಲ್ಲಿಯೇ ಮಾತನಾಡಿದರು. ಕಾರ್ಯಕ್ರಮದ ನಿರ್ವಹಣೆ ಸಹ ಕನ್ನಡದಲ್ಲಿತ್ತು. ಆದರೆ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಮಾತ್ರ ತಮ್ಮ ಮಾತೃ ಭಾಷೆ ತೆಲುಗಿನಲ್ಲಿ ಮಾತನಾಡಿದರು.