ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು ಎಸಿಬಿ ಬಲೆಗೆ

ವಿಜಯಪುರ, ನ.11- ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಿರೀಕ್ಷಕಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇಂಡಿ ಪಟ್ಟಣದ ರೂಪೇಶ ಶಹಾ ಅವರು ತಮ್ಮ ತಾಯಿ ನೀನಾ ವಸಂತಲಾಲ ಶಹಾ ಹೆಸರಿನ ಪಾರ್ಶ್ವ ಪೆಟ್ರೋಲ್ ಬಂಕ್ ನ ಪರವಾನಗಿ ನವೀಕರಿಸುವಂತೆ ಮನವಿ ಮಾಡಿ ಜಿಲ್ಲಾ ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಡೋಂಬರ ಮತ್ತೂರ ಹಾಗೂ ಕಾರ್ಮಿಕ ನಿರೀಕ್ಷಕಿ ಲಲಿತಾ ರಾಠೋಡ ಅವರು 10 ಸಾವಿರ ರೂ. ಲಂಚ ಕೇಳಿದ್ದಾರೆ. ಮುಂಗಡವಾಗಿ 5 ಸಾವಿರ ರೂ. ನೀಡುವಂತೆ ತಿಳಿಸಿದ್ದಾರೆ.
ಈ ಬಗ್ಗೆ ರೂಪೇಶ ಎಸಿಬಿಗೆ ದೂರು ಸಲ್ಲಿಸಿದ್ದು, ದೂರಿನ ಅನ್ವಯ ಎಸಿಬಿ ಅಧೀಕ್ಷಕ ಬಿ.ಎಸ್.ನೇಮಗೌಡ ನೇತ್ವತ್ವದ ಉಪಾಧೀಕ್ಷಕ ಎಂ.ಕೆ.ಗಂಗಲ ತಂಡ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿ, ಇಬ್ಬರು ಅರೋಪಿಗ ಳನ್ನು ವಶಕ್ಕೆ ಪಡೆದಿದ್ದಾರೆ.