ಹಣಕುಣಿಯಲ್ಲಿ ಸಿಡಿಲು ಬಡಿದು ಎಮ್ಮೆ ಸಾವು

ಹುಮನಾಬಾದ್:ಮೇ.1: ಗುಡುಗು, ಸಿಡಿಲು ಸಹಿತ ಭಾನುವಾರ ಸುರಿದ ಮಳೆಗೆ ತಾಲೂಕಿನ ಹಣಕುಣಿ ಗ್ರಾಮದ ರೈತರ ಹೊಲದಲ್ಲಿ ಎಮ್ಮೆಗಳು ಸಾವನಪ್ಪಿರುವ ಘಟನೆ ಜರುಗಿದೆ.
ಹಣಕುಣಿ ಗ್ರಾಮದ ರೈತರಾದ ಶ್ರೀನಿವಾಸ ರಡ್ಡಿ ಅವರಿಗೆ ಸೇರಿದ ಒಟ್ಟು ಎಮ್ಮೆಗಳು ಸಾವನಪ್ಪಿವೆ. ಭಾನುವಾರ ಸುರಿದ ಭಾರಿ ಪ್ರಮಾಣದ ಮಳೆಯ ಜತೆಯಲ್ಲಿ ಸಿಡಿಲು ಬಡಿದು ಎಮ್ಮೆಗಳು ಸಾವನಪ್ಪಿವೆ. ಎಮ್ಮೆಗಳು ಅಂದಾಜು 1 ಲಕ್ಷ ರೂಪಾಯಿಯ ಎಮ್ಮೆಗಳು ಇರಬಹುದು ಎಂದು ಅಧಿಕರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನಾ ಸ್ಥಳಕ್ಕೆ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಗೋವಿಂದ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.