ಹಡಲಗಿ ಎಲ್ಲಮ್ಮ ಜಾತ್ರೆ; ಮಕ್ಕಳೊಂದಿಗೆ ಸಿಡಿ ಆಡಿದ ಭಕ್ತರು

ಕಲಬುರಗಿ,ಮೇ.16: ಆಳಂದ ತಾಲೂಕಿನ ಹಡಲಗಿ ಎಲ್ಲಮ್ಮ ಜಾತ್ರೆಯಲ್ಲಿ ಪುರುಷರು ಮಹಿಳೆಯರು ಸೇರಿ ಹಸು ಕಂದಮ್ಮಗಳನ್ನು ಕಂಕುಳಲ್ಲಿ ಎತ್ತಿಕೊಂಡು ಸಿಡಿ ಆಡಿ ಹರಕೆ ತೀರಿಸಿದರು.
ಉರಿ ಬಿಸಿಲಲ್ಲಿ ಬರಿಗಾಲಲ್ಲಿ ಮಹಿಳೆಯರು ಪುರುಷರು ತಮ್ಮ ತಮ್ಮ ಹರಕೆ ತೀರಿಸಲು ದೂರದ ಮುಂಬೈ ಪುಣೆ ಗುಜರಾಥ ರಾಜಸ್ಥಾನ ಮುಂತಾದ ಕಡೆಯ ಪಾರ್ದಿ ಜನಾಂಗದವರು ಹೆಚ್ಚಾಗಿ ಸಿಡಿ ಆಡಿದರು. ಲಕ್ಷಾಂತರ ಜನರು ಬಿಸಿಲನ್ನು ಲೆಕ್ಕಿಸದೆ ಈ ಒಂದು ಜಾತೆಯಲ್ಲಿ ಭಾಗವಹಿಸುತ್ತಾರೆ. ಸಾವಿರಾರು ಕುರಿಗಳು ಬಲಿಕೊಟ್ಟು ತಮ್ಮ ಹರಕೆ ತೀರಿಸಿದರು. ಮುಂಜಾನೆಯಿಂದ ದೇವಿ ಮಂದಿರದಲ್ಲಿ ಆರಂಭವಾಗುವ ಮಂಗಳಮುಖಿಯರ ನೃತ್ಯ, ವಿಶೇಷ ಗಮನ ಸೆಳೆಯುತ್ತದೆ. ನೈವುದ್ಯ ಪೂಜೆಗಳು ಮದ್ಯಾನದ ವರೆಗ ನಡೆಯುತ್ತವೆ. ನಂತರ 2 ಗಂಟೆಗೆ ಆರಂಭವಾಗುವ ಸಿಡಿ ಆಡುವ ಕಾರ್ಯಕ್ರಮಕ್ಕೆ ಭಕ್ತರು ಆಗಮಿಸುತ್ತಾರೆ. ಪೂಜಾರಿಗಳು ಗುಡಿಯ ಒಳಗೆ ಕಬ್ಬಣದ ಕೊಂಡಿಗಳನ್ನು ಬೆನ್ನಿಗೆ ಚುಚ್ಚಿ ಹೊರಗೆ ತಂದು ಬಿಡುತ್ತಾರೆ. ಕೆಲವರು ಹಸು ಗೂಸುಗಳನ್ನು ಕಂಕುಳಲ್ಲಿ ಎತ್ತಿಕೊಂಡು ಸಿಡಿ ಆಡಿದ್ದು ಗಮನ ಸೆಳೆಯಿತು.
ತಾಳಿಯನ್ನು ಕದ್ದ ಕಳ್ಳರು: ಜಾತ್ರೆಯಲ್ಲಿ ಕಳ್ಳರ ಕೈಚಳಕ ಜಾಸ್ತಿ. ಹಣ ಕಳೆದುಕೊಂಡವರು. ಪರ್ಸ ಕಳೆದುಕೊಂಡರು. ಕೈಯಲ್ಲಿದ್ದ ಹಣವನ್ನು ಕಸಿದು ಪರಾರಿ ಯಾದರು. ಮಹಳೆಯಿಬ್ಬರ ತಾಳಿಯನ್ನು ಬಿಡದ ಕದ್ದರು. ಪೋಲಿಸರು ಎಷ್ಟೆ ಹದ್ದಿನ ಕಣ್ಣು ಇಟ್ಟರು ಕಳ್ಳರು ಸಿಗಲಿಲ್ಲ. ಕುಡಕಿ ಗ್ರಾಮದ ಭಾಗ್ಯಶ್ರೀ ತಾಳಿ ಕಳೆದುಕೊಂಡ ಮಹಿಳೆ. ನೀರಿನ ವ್ಯಾಪಾರ ಜೋರಾಗಿತ್ತು. ಗ್ರಾಮ ಪಂಚಾಯಿತಿಯವರು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರೂ ನೀರಿನ ಅಭಾವ ಕಂಡು ಬಂತು. ಮಾದನಹಿಪ್ಪರಗಿ ಪೊಲೀಸ ಠಾಣೆಯ ಪಿಎಸ್‍ಐ ಪರಶುರಾಮ ಮತ್ತು ನಿಂಬರಗಾ ಪೊಲೀಸ ಠಾಣೆಯ ಪಿಎಸ್‍ಐ ರೇಣುಕಾ ಅವರು ತಮ್ಮ ಸಿಬ್ಬಂಧಿಗಳಗಳೊಂದಿಗೆ ಜಾತ್ರೆಯಲ್ಲಿ ಬಂದೋಬಸ್ತ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ ಕುಲಕರ್ಣಿ ಮುಖಂಡರಾದ ಬಸಣ್ಣ ಮಾಂಗ, ವಿಶ್ವನಾಥ ಸರಸಂಬಿ, ಲಾಲಪಟೇಲ ಡಿಗ್ಗಿ, ಮೌಲಪ್ಪ ಪೂಜಾರಿ, ಧನಂಜಯ ಪೂಜಾರಿ, ಮಲ್ಲಪ್ಪ ಪೂಜಾರಿ ಇದ್ದರು.