ಹಡಪದ ಸಮಾಜದ ಬಗ್ಗೆ ಗೌರವವಿದೆ: ಸಚಿವ ಪ್ರಭು ಚವ್ಹಾಣ್

ಬೀದರ, ಏ.02: ಬಸವಕಲ್ಯಾಣ ಚುನಾವಣಾ ಪ್ರಚಾರ ಭಾಷಣದಲ್ಲಿ ನಾನು ಹಡಪದ ಸಮಾಜದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದೇನೆಂದು ಸಾಮಾಜಿಕ ಜಾಲ ತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಹಡಪದ ಸಮಾಜದ ಬಗ್ಗೆ ಅತ್ಯಂತ ಗೌರವವಿದೆ. ಆ ಸಮಾಜದ ಕುರಿತು ನಾನು ಯಾವುದೇ ರೀತಿಯ ಅಪಶಬ್ದಗಳನ್ನು ಬಳಸಿಲ್ಲ ಎಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ತಿಳಿಸಿದ್ದಾರೆ.

ಬಸವಣ್ಣನವರ ಕಾಯಕ ತತ್ವವನ್ನು ಬಲವಾಗಿ ನಂಬುವ ವ್ಯಕ್ತಿ ನಾನು. ಹಡಪದ ಸಮಾಜದವರು ಕಾಯಕ ಜೀವಿಗಳು. ಅವರಿಗೆ ಅವಮಾನ ಮಾಡುವ ರೀತಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ನಾನೂ ಸಹ ತಳಸಮುದಾಯದಿಂದ ಬಂದವನು. ಹೀಗಾಗಿ ಸರ್ವ ಸಮಾಜವನ್ನು ಗೌರವದಿಂದ ಕಾಣುತ್ತಲೇ ಬಂದಿದ್ದೇನೆ. ಆದರೂ ಕೆಲವರಿಗೆ ನೋವಾದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.