ಹಡಪದ ಸಮಾಜದಿಂದ ಶಾಸಕರಿಗೆ ಸನ್ಮಾನ

ಸಿರವಾರ,ಮೇ.೩೧-
ತಾಲೂಕು ಹಡಪದ ಸಮಾಜದ ವತಿಯಿಂದ ಮಾನ್ವಿ ಕ್ಷೇತ್ರದ ನೂತನ ಕಾಂಗ್ರೆಸ್ ಪಕ್ಷದ ಶಾಸಕ ಜಿ.ಹಂಪಯ್ಯ ನಾಯಕ ಅವರಿಗೆ ಸನ್ಮಾನಿಸಲಾಯಿತು.
ಸಮಾಜದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮಸ್ಯೆಗಳು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಸದನದಲ್ಲಿ ಧ್ವನಿ ಎತ್ತಬೇಕು ಎಂದು ಮನವಿ ಸಲ್ಲಿಸಿದರು.
ಈ ವೇಳೆ ಚನ್ನಯ್ಯಸ್ವಾಮಿ ಹೆಮನೂರು, ಸಮಾಜದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ್, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ್ ಹಡಪದ, ಸಮಾಜದ ಮುಖಂಡರಾದ ನಾಗರಾಜ್ ಹರವಿ, ಬಸವರಾಜ್ ನೂಗುಡೋಣಿ, ಬಸವರಾಜ್, ಭೀಮಣ್ಣ, ಮೌನೇಶ್, ಹನುಮಂತ, ಈರಣ್ಣ ಹಡಪದ, ವೀರೇಶ್, ಇತರರು ಇದ್ದರು.