
ಬೀದರ್: ಫೆ.25:ಬಸವಣ್ಣನ ಕಾಯಕ ತತ್ವ ನಂಬಿ ಬದುಕು ನಡೆಸುತ್ತಿರುವ ಹಡಪದ ಸಮಾಜದ ಪ್ರಗತಿಗಾಗಿ ಕರ್ನಾಟಕ ಹಡಪದ ನಿಗಮ ಮಂಡಳಿ ಸ್ಥಾಪನೆ ಆದೇಶ ಹೊರಡಿಸಿದ್ದು ಬಹಳಷ್ಟು ಹರ್ಷ ಉಂಟುಮಾಡಿದೆ, ಹಡಪದ ಸಮಾಜದ ವತಿಯಿಂದ ಮತ್ತು ಸಮಸ್ತ ಜನತೆಯ ಪರವಾಗಿ ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇನೆ ಎಂದು ಕೆಎಸ್‍ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.
ಈ ಕುರಿತು ಪತ್ರಿಕೆ ಪ್ರಕಟನೆ ನೀಡಿದ ಅವರು ನಿಗಮ ಮಂಡಳಿ ಸ್ಥಾಪನೆಯಿಂದ ಈ ಸಮಾಜಕ್ಕೊಂದು ಅಸ್ತಿತ್ವ ಕೊಡುವ ಹಾಗೆ ಶಿಕ್ಷಣ ಮತ್ತು ಆರ್ಥಿಕ ವ್ಯವಸ್ಥೆಗೆ ಅವರು ಭದ್ರ ಬುನಾದಿಯಾಗಿದೆ. ಹಡಪದ ಜಾತಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಈಗ ಹಡಪದ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಹೊಸ ನಿಗಮ ಸ್ಥಾಪನೆಗೆ ಆದೇಶ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು ತಿಳಿಸಿದ್ದಾರೆ.