ಹಡಪದ ಅಪ್ಪಣ ಜಯಂತಿ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜು.13:ಅಡಪದ ಅಪ್ಪಣನವರು12ಶತಮಾನದಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಆಪ್ತ ಸಹಾಯಕರಾಗಿದ್ದರು ಎಂದು ಅಡಪದ ಸಮಾಜ ಮುಖಂಡರಾದ ಎಚ್. ಜೆ. ಮಂಜುನಾಥ್ ತಿಳಿಸಿದರು.
  ಇಂದು ಪಟ್ಟಣದ ನೂತನ ತಾಲೂಕು ಕಚೇರಿಯಲ್ಲಿ ನಡೆದ ಅಡಪದ ಅಪ್ಪಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಆಗಿನ ಕಾಲದಲ್ಲೇ ಅಡಪದ ಅಪ್ಪಣನವರು ಜಾತಿ ವ್ಯವಸ್ಥೆ ವಿರುದ್ಧ ತಮ್ಮ ವಚನಗಳ ಮೂಲಕ ಸಾರಿದರು. ಅವರ ಆದರ್ಶ ತತ್ವಗಳು ಇಂದಿನ ಕಾಲದಲ್ಲೂ ಮಹತ್ವವಾದ ನುಡಿಮುತ್ತುಗಳಾಗಿವೆ. ಡಾ. ಬಿ. ಆರ್. ಅಂಬೇಡ್ಕರ್ ರವರ ಸಂವಿಧಾನ ಎಲ್ಲಾ ಜನಾಂಗದ ಜನರಿಗೂ ಸಮಾನತೆ ಹಕ್ಕು ನೀಡಿ, ಬದುಕಿಗೊಂದು ಅರ್ಥ ಕಲ್ಪಿಸಿದೆ ಎಂದು ತಿಳಿಸಿದರು.
   ಈ ಸಂದರ್ಭದಲ್ಲಿ ಪ ಸಂ ಇ ಸ ನಿ ರಂಗಪ್ಪ ಮಾತನಾಡಿ, ಅಡಪದ ಅಪ್ಪಣನವರು 12 ಶತಮಾನದ ಶರಣರು ಮತ್ತು ವಚನಕಾರರು ಬಸವಣ್ಣನವರ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಆಪ್ತರಾಗಿದ್ದು, ತಮ್ಮ ವಚನಗಳ ಮೂಲಕ ಸಮನ್ವಯ ಸಮಾನತೆ ಯನ್ನು ಸಾರಿದ ಮಹಾ ಶರಣ ಪುರುಷರು ಎಂದು ತಿಳಿಸಿದರು.
   ಈ ಕಾರ್ಯಕ್ರಮದಲ್ಲಿ   ಜಾಫರ್ ಶರೀಫ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಆರ್ ಐ ಪ್ರಾಣೇಶ್, ಶೀ ಆಂಜನಪ್ಪ, ಅ ಅ ಮಧು ಕುಮಾರ್, ಇಂಜಿನಿಯರ್ ಪ್ರಕಾಶ್ ಮತ್ತು ಸಮಾಜದ ಮುಖಂಡರಾದ ತಿಪ್ಪೇಸ್ವಾಮಿ, ಈರಣ್ಣ, ಬಸವರಾಜಪ್ಪ, ಹನುಮಂತಪ್ಪ, ವೇದಮೂರ್ತಿ, ನುಂಕೇಶ್, ಬಂಗಾರಪ್ಪ ಇನ್ನು ಮುಂತಾದವರಿದರು.