
ತಾಳಿಕೋಟೆ:ಮಾ.2: ಹಡಪದ ಅಪ್ಪಣ್ಣ ಸಮಾಜದ ಜನರಿಗೆ ಬಹುದಿನಗಳ ಬೇಡಿಕೆಯಾಗಿದ್ದ ನಿಗಮ ಮಂಡಳಿ ಸರ್ಕಾರದಿಂದ ಅಸ್ಥಿತ್ವಕ್ಕೆ ತರಲು ಕಾರೀಣಿಕರ್ತರಾದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರಿಗೆ ತಾಳಿಕೋಟೆ ಹಡಪದ ಅಪ್ಪಣ್ಣ ಸಮಾಜ ಬಾಂದವರು ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು.
ಸಮಾಜದ ಮುಖಂಡ ಶಾಂತಪ್ಪ ಹಡಪದ(ಭಂಟನೂರ) ಮಾತನಾಡಿ ಹಡಪದ ಅಪ್ಪಣ್ಣ ಸಮಾಜಕ್ಕೆ ಯಾವಾಗಲೂ ಸಾಮಾಜಿಕ ನ್ಯಾಯವಾಗಿ ನಿಗಮ ಮಂಡಳಿ ಸ್ಥಾಪನೆಯಾಗಬೇಕಿತ್ತು ಕೇವಲ ವೃತ್ತಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಹಡಪದ ಅಪ್ಪಣ್ಣ ಸಮಾಜಕ್ಕೆ ಹಿಂದಿನ ಸರ್ಕಾರಗಳು ನಿರ್ಲಕ್ಷೀಸುತ್ತಾ ಸಾಗಿಬಂದಿದ್ದವು ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತಂಗಡಗಿಯಲ್ಲಿ ನಿರ್ಮಿಸಲಾದ ಹಡಪದ ಅಪ್ಪಣ ಸಮಾಜದ ಭವನದ ಉದ್ಘಾಟನೆಗೆ ಹಡಪದ ಅಪ್ಪಣ್ಣ ಸಮಾಜದ ಶ್ರೀಗಳ ಅಪೇಕ್ಷೆಯಂತೆ ಕರೆಯಿಸಿದ ಶಾಸಕ ನಡಹಳ್ಳಿ ಅವರು ಹಡಪದ ಅಪ್ಪಣ್ಣ ಸಮಾಜದ ಜನರ ಸಂಕಷ್ಟದ ಬಗ್ಗೆ ಹಾಗೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳವಣಿಗೆಗೆ ಅವಶ್ಯವಿರುವದನ್ನು ವಿವರಿಸುವದರ ಜೊತೆಗೆ ನಿಗಮ ಮಂಡಳಿ ಸ್ಥಾಪನೆಗೆ ಒತ್ತಡವನ್ನೂ ಕೂಡಾ ಹಾಕಿದ್ದರು ನಂತರ ಅದಿವೇಶನದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಒತ್ತಡ ಹಾಕಿ ಸಮಾಜದ ಜನರಿಗೆ ಒಳಿತಿಗೋಸ್ಕರ ನಿಗಮ ಮಂಡಳಿ ಸ್ಥಾಪಿಸಲು ಸಹಕರಿಸಿದ್ದಾರೆ ಅವರಿಗೆ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಮಾಜದ ಪರವಾಗಿ ಕೃತಜ್ಞರಾಗಿದ್ದೇವೆಂದರಲ್ಲದೇ ಅವರ ಬೆಂಬಲಕ್ಕೆ ಸಮಾಜದ ಜನರು ಸದಾ ನಿಲ್ಲುತ್ತೇವೆಂದರು.
ಸಮಾಜದ ಜನರ ಜೊತೆ ಸಭೆ ನಡೆಸಿದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಅವರ ಕುಂದುಕೊರತೆಗಳನ್ನು ಆಲಿಸಿದರಲ್ಲದೇ ತಾಳಿಕೋಟೆಯಲ್ಲಿ ಮುಂದಿನ ದಿನಗಳಲ್ಲಿ ಸಮುದಾಯ ಭವನ ಅಲ್ಲದೇ ಇನ್ನಿತರ ಕಾರ್ಯಗಳನ್ನು ಸಮಾಜಕ್ಕೆ ಮಾಡಿಕೊಡುವದಾಗಿ ತಿಳಿಸಿದರು.
ಈ ಸಮಯದಲ್ಲಿ ಸಮಾಜದ ಪ್ರಭು ಹಡಪದ, ವೀರಭದ್ರ ನಾವಿ, ಬಸವರಾಜ ಉಕನಾಳ, ಭೀಮಣ್ಣ ಹಡಪದ, ಶಾಂತಣ್ಣ ಮಡಿಕೇಶ್ವರ, ಗುರಣ್ಣ ಹಡಪದ, ಸಂಗಣ್ಣ ಹಡಪದ, ಅಯ್ಯಪ್ಪ ಉಕನಾಳ, ರಮೇಶ ಲಿಂಗದಳ್ಳಿ, ಮಲ್ಲಣ್ಣ ರುಕುಂಪಠೆ, ಮೊದಲಾದವರು ಇದ್ದರು.