ಹಡಪದ ಅಪ್ಪಣ್ಣ ಶಾಲಾ ಸಂಸತ್ತು ರಚನೆ

ಇಂಡಿ;ಜು.12: ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023- 24 ನೇ ಸಾಲಿನ ಶಾಲಾ ಸಂಸತ್ತು ರಚಿಸಲಾಯಿತು.

ಪ್ರಾಥಮಿಕ ವಿಭಾಗಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಯುವರಾಜ ಬಡಿಗೇರ, ಉಪ ಪ್ರಧಾನ ಕಾರ್ಯದರ್ಶಿ ಪ್ರದೀಪ ಪಾಟೀಲ, ಮಹಿಳಾ ಪ್ರತಿನಿಧಿಯಾಗಿ ಕುಮಾರಿ ಪೃಥ್ವಿ ತಾಂಬೆ, ಉಪ ಮಹಿಳಾ ಪ್ರತಿನಿಧಿ ಸುಜಾತಾ ಚವ್ಹಾಣ ಆಯ್ಕೆಯಾದರು.

ಪ್ರೌಢಶಾಲೆ ವಿಭಾಗದಲ್ಲಿ ರಾಹುಲ್ ಹದಗಲ್ಲ, ಉಪ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ನಾವಿ, ಮಹಿಳಾ ಪ್ರತಿನಿಧಿ ಭಾಗ್ಯಶ್ರೀ ನಾವಿ, ಉಪ ಮಹಿಳಾ ಪ್ರತಿನಿಧಿ ರಕ್ಷಿತಾ ತಿಲ್ಲಿಹಾಳ ಹಾಗೂ ಶಾಲಾ ಸಂಸತ್ತಿನ ಮಂತ್ರಿಗಳಾಗಿ ಸೌಜನ್ಯ, ಶ್ರೀ ಲಕ್ಷ್ಮೀ, ಪದ್ಮಣ್ಣ, ಶೃಷ್ಠಿ, ವಿಜಯಕುಮಾರ, ಅಮೃತಾ ನಾಟಿಕಾರ, ಪ್ರದೀಪ ತೋಟಾಪುರ, ಬಾಬುರಾವ ಉಮರ್ಜಿ, ಯಾಸಿನ್, ಲಕ್ಷ್ಮೀ, ಪ್ರಜ್ವಲ್, ಗುರುಬಾಯಿ, ವಾಣಿಶ್ರೀ, ವಿಶಾಲ್, ಲಕ್ಷ್ಮೀ, ಸಮರ್ಥ, ಮಯೂರಿ ಆಯ್ಕೆ ಯಾಗಿದ್ದಾರೆ ಎಂದು ಚುನಾವಣೆ ನೋಡಲ್ ಅಧಿಕಾರಿ ಈರಣ್ಣ ರೋಗಿ ತಿಳಿಸಿದ್ದಾರೆ.

ನೂತನ ಸಚಿವ ಸಂಪುಟಕ್ಕೆ ಮುಖ್ಯೋಪಾಧ್ಯಾಯ ಎ.ಎಸ್.ಬೋರಾಮಣಿ, ಕುಮಾರಿ ಜಯಶ್ರೀ ಗೌಡರ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.