
ಕಲಬುರಗಿ,ಆ 13: ರಾಜ್ಯದಲ್ಲಿ ಹಡಪದ ಅಪ್ಪಣ್ಣ ಸಮಾಜದ ಹಾಗೂ ಸಮಾಜದ ಅನೇಕ ಬೇಡಿಕೆಗಳನ್ನು ಸೇರಿದಂತೆ 15 ಕ್ಕೂ ಹೆಚ್ಚು ಒಳ ಪಂಗಡಗಳಿಗೆ ಸರಕಾರವು ಘೋಷಣೆ ಮಾಡಿದ ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮಕ್ಕೆ ಮುಖ್ಯಮಂತ್ರಿಗಳು ಕೂಡಲೇ ಕಲ್ಯಾಣ ಕರ್ನಾಟಕ ಭಾಗದಿಂದ ಅಧ್ಯಕ್ಷರು ಮತ್ತು ರಾಜ್ಯದ ಇತರ ಜಿಲ್ಲೆಗಳಿಂದ ನಿರ್ದೇಶಕರನ್ನು ಆಯ್ಕೆ ಮಾಡಿ ಕೂಡಲೇ ನಿಗಮ ಘೋಷಣೆ ಮಾಡಬೇಕು ಎಂದು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ-ಡಾ. ಮಲ್ಲಿಕಾರ್ಜುನ. ಬಿ.ಹಡಪದ ಸುಗೂರ ಎನ್
ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಈ ಹಿಂದಿನ ಸರ್ಕಾರವು ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಅನುಮತಿ ನೀಡಿತ್ತು. ಇದಕ್ಕೆ ಹಣಕಾಸಿನ ನೆರವನ್ನು ನೀಡಲಿಲ್ಲ ಮತ್ತು ಈಗಿನ ಸರಕಾರವು ಈ ಸಾಲಿನ ಬಜೆಟ್ ನಲ್ಲಿ ನಮ್ಮ ಹಡಪದ ಅಪ್ಪಣ್ಣ ಸಮಾಜಕ್ಕೆ ಹಣ ಘೋಷಣೆ ಕೂಡ ಮಾಡಿಲ್ಲ.ಇತರ ನಿಗಮಗಳಿಗೆ ನೂತನ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನೇಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು. ಕೂಡಲೇ ಹಡಪದ ಅಪ್ಪಣ್ಣ ಸಮಾಜ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ಮತ್ತು ನಿರ್ದೇಶಕರನ್ನು ನೇಮಿಸಿ ರಾಜ್ಯದ ಸುಮಾರು 14 ರಿಂದ 15 ಲಕ್ಷದಷ್ಟು ಇರುವ ಈ ಜನಸಮುದಾಯದ ಆರ್ಥಿಕ. ಸಾಮಾಜಿಕ ಶೈಕ್ಷಣಿಕ, ಅಭಿವೃದ್ಧಿಗೆ ಸರಕಾರವು ಒತ್ತು ನೀಡಬೇಕಾಗಿದೆ. ಇದಕ್ಕಾಗಿ ತಕ್ಷಣದಲ್ಲಿ 100 ಕೋಟಿಗಳ ರೂಪಾಯಿಗಳ ಆರ್ಥಿಕ ನೆರವು ನೀಡಿ ನಿಗಮ ಸಮರ್ಥವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು. ಹಡಪದ ಅಪ್ಪಣ್ಣ (ಕ್ಷೌರಿಕ ಸಮಾಜವನ್ನು ಎಸ್ಸಿಗೆ ಅಥವಾ ಎಸ್ಟಿ ಗೇ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಪಾರಸ್ಸು ಮಾಡಬೇಕು. ಹಾಗೆಯೇ ಈ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜನತೆಗೆ ಜಾತಿ ನಿಂದನೆ ಪದ ಬಳಕೆ ಮಾಡುವ ವ್ಯಕ್ತಿಗಳಿ ಕಾನೂನು ಪ್ರಕಾರ ಅಟ್ರಾಸಿಟಿ. ಜಾರಿಗೆ ತರುವಂತೆ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.