ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮ ಸ್ಥಾಪನೆ: ಶ್ರೀಗಳಿಗೆ ಸನ್ಮಾನ

ದಾವಣಗೆರೆ.ಫೆ.೨೨; ಹಡಪದ ಸಮಾಜದ ಬಹುಬೇಡಿಕೆಯಾಗಿದ್ದ ಕರ್ನಾಟಕ ಹಡಪದ ಅಪ್ಪಣ್ಣ ಅಭಿವೃದ್ಧಿ ನಿಗಮ ಸ್ಥಾಪನೆಗೆ ಶ್ರಮವಹಿಸಿದ ಸಮಾಜದ ಶ್ರೀ ಅನ್ನದಾನ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿಯವರನ್ನು ಜಿಲ್ಲಾ ಸಮಿತಿ ವತಿಯಿಂದ ಮಾರ್ಚ್ ತಿಂಗಳ ಕೊನೆವಾರದಲ್ಲಿ ಸನ್ಮಾನಿಸಲಾಗುವುದು ಎಂದು ಸಮಾಜದ ಜಿಲ್ಲಾ ಕಾರ್ಯದರ್ಶಿ ಡಾ.ಎನ್ ಜೆ ಶಿವಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮೊಯಿಯವರು ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ಅಭಿವೃದ್ಧಿ ನಿಗಮ ನೀಡುವುದಾಗಿ ಘೋಷಿಸಿ‌ದ್ದರು ಈಗ ನುಡಿದಂತೆ ನಡೆದಿದ್ದಾರೆ. ಇದು‌ ಸಮಾಜದ ಅಭಿವೃದ್ಧಿಗೆ ಪೂರಕವಾಗಲಿದೆ.ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ನಡೆದ ಹೋರಾಟದಲ್ಲಿ ಶ್ರೀ ಅನ್ನದಾನ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ಯವರ ಶ್ರಮ‌ಸಾಕಷ್ಠಿದೆ ಅವರೊಂದಿಗೆ ರಾಜ್ಯಾಧ್ಯಕ್ಷರ ಹೋರಾಟ ಹಾಗೂ ಸಮಾಜ ಬಾಂಧವರ ಹೋರಾಟದ ಫಲವಾಗಿ ಬಹು‌ದಿನಗಳ‌ ಬೇಡಿಕೆ ಈಡೇರಿದೆ.ಪ್ರತ್ಯೇಕ ಅಭಿವೃದ್ಧಿ ‌ನಿಗಮ‌ಮಂಡಳಿ ಘೋಷಣೆ ಮಾಡಿದ್ದು ಸಂತಸ ತಂದಿದೆ ಎಂದರು.ಇದೇ ವೇಳೆ ನಮ್ಮ ಜಿಲ್ಲಾ, ತಾಲ್ಲೂಕು ಪದಾಧಿಕಾರಿಗಳು ಸರ್ಕಾರಕ್ಕೆ
ಅಭಿನಂದಿಸಿದ್ದಾರೆ ಹಾಗೂ ಮಾರ್ಚ್ ತಿಂಗಳಲ್ಲಿ‌ ಕೊನೆವಾರದಲ್ಲಿ ದಾವಣಗೆರೆಯ ಶಿವಯೋಗಮಂದಿರದಲ್ಲಿ ಶ್ರೀ ಗಳಿಗೆ ಸನ್ಮಾನ ಮಾಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಹೆಚ್ ಶಶಿಧರ್ ಬಸಾಪುರ,ಹಾಲೇಶ್ ಹರಿಹರ,ಅಜ್ಜಪ್ಒ ಕೋಮಾರನಹಳ್ಳಿ,ಬಸವರಾಜ್, ಗಣೇಶ್,ವೀರೇಶ್,ಜ್ಯೋತೆಪ್ಪ,ಚಿಕ್ಕೀರೇಶ್ ಇದ್ದರು.